newsics.com
ಬಲೂಚ್ ಲಿಬರೇಶನ್ ಆರ್ಮಿ ಬೋಲನ್‌ನ ಮಾಚ್ ಕುಂಡ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪಾಕಿಸ್ತಾನಿ ಸೇನಾ ವಾಹನದ ಮೇಲೆ ರಿಮೋಟ್ ಕಂಟ್ರೋಲ್ಡ್ ಐಇಡಿಯಿಂದ ದಾಳಿ ನಡೆಸಿದ್ದು. ಈ ದಾಳಿಯಲ್ಲಿ 12 ಪಾಕಿಸ್ತಾನಿ ಸೈನಿಕರ ದೇಹ ಪೀಸ್ ಪೀಸ್ ಆಗಿದೆ. ಭಾರತವು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳನ್ನು ಕ್ಷಿಪಣಿ ದಾಳಿಯಿಂದ ನಾಶಪಡಿಸಿದ್ದ ಸಮಯದಲ್ಲಿ ಪಾಕಿಸ್ತಾನಕ್ಕೆ ಈ ಹೊಡೆತ ಬಿದ್ದಿದ್ದು.
ಬಲೂಚಿಸ್ತಾನದ ಬೋಲನ್ ಜಿಲ್ಲೆಯ ಮಾಚ್ ಕುಂಡ್ ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ವಾಹನದ ಮೇಲೆ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 12 ಪಾಕಿಸ್ತಾನಿ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದರು.ಶೋರ್ಕಂಡ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯು ಗಸ್ತು ತಿರುಗುತ್ತಿದ್ದಾಗ ನಡೆದಿದೆ. ಈ ದಾಳಿಯ ಹೊಣೆಯನ್ನು ಬಿಎಲ್‌ಎ ಹೊತ್ತುಕೊಂಡಿದೆ. ಈ ದಾಳಿಯನ್ನು ಬಿಎಲ್‌ಎಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ದಳ (ಎಸ್‌ಟಿಒಎಸ್) ನಡೆಸಿತು.