newsics.com
ನವದೆಹಲಿ:ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿತ್ತು. ಚಿನ್ನಾಭರಣ ಪ್ರಿಯರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ ಇಂದು ಮತ್ತೆ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದ್ದು, ಗ್ರಾಹಕರನ್ನು ದಂಗು ಬಡಿಸಿದೆ. ಚಿನ್ನದ ಮತ್ತೆ ಒಂದು ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದೆ. ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗಡಿ ಉದ್ವಿಗ್ನತೆ ಸ್ಥಿತಿ ದರ ಹೆಚ್ಚಳಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರೂಪಾಯಿಗೆ ತಲುಪಿದೆ.
ಶೇ. 99.5 ಪರಿಶುದ್ಧತೆಯ ಚಿನ್ನ ಬುಧವಾರ ಒಂದೇ ದಿನ 1000 ರೂ. ಏರಿಕೆ ಕಂಡಿದ್ದು, 1,00,750 ರೂಪಾಯಿಗೆ ತಲುಪಿದೆ. ಮಂಗಳವಾರ 99,750 ರೂ. ಇತ್ತು. ಆಭರಣ ಚಿನ್ನದ ದರ ಕೂಡ 1050 ರೂಪಾಯಿ ಏರಿಕೆ ಕಂಡಿದ್ದು, 1,00, 350 ರೂಪಾಯಿಗೆ ತಲುಪಿದೆ. ಮಂಗಳವಾರ 99,300 ರೂ. ರೂಪಾಯಿ ಇತ್ತು
ಬೆಳ್ಳಿ ದರ ಕೆಜಿಗೆ 440 ಏರಿಕೆಯಾಗಿ 98,940 ರೂ.ಗೆ ತಲುಪಿದೆ. ಹಿಂದಿನ ದಿನ 98,500 ರೂ. ದರ ಇತ್ತು.