newsics.com
ಯಾದಗಿರಿ: ಕುರಿ ಮೇಯಿಸಲು ಹೋಗಿದ್ದ ಮೂರು ಜನ ಸಹೋದರರು ನೀರು ಪಾಲಾಗಿರುವ ಘಟನೆ ಯಾದಗಿರಿ ತಾಲೂಕಿನ ಅಚೋಲಾ ತಾಂಡದಲ್ಲಿ ನಡೆದಿದೆ.
ಅಚೋಲಾ ತಾಂಡದ 10 ವರ್ಷದ ಕೃಷ್ಣ ರಾಠೋಡ್, 14 ವರ್ಷದ ಜಯ ರಾಠೋಡ್ ಹಾಗೂ 12 ವರ್ಷದ ಅಮರ್ ಎಂಬ ಮೂವರು ಮೃತಪಟ್ಟ ಬಾಲಕರು ಎಂದು ತಿಳಿದು ಬಂದಿದೆ.
ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರು ಮಾಡುತ್ತಿದ್ದ ಕುರಿ ಕಾಯುವ ಕೆಲಸವನ್ನು ತಾವೂ ಮಾಡುತ್ತಿದ್ದರು. ರವಿವಾರ ಕೂಡ ಬೆಳಗ್ಗೆ ಊಟ ಕಟ್ಟಿಕೊಂಡು ಕುಡಿಯುವ ನೀರು ತೆಗೆದುಕೊಂಡು ಕುರಿಗಳನ್ನು ಕಾಯೋಕೆ ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ತಾವು ತೆಗೆದುಕೊಂಡು ಬಂದಿದ್ದ ನೀರು ಬಿಸಿಯಾಗಿದ್ದಕ್ಕೆ ಪಕ್ಕದಲ್ಲೇ ಇದ್ದ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.