newsics.com
ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಉದ್ಯಮಿ ಮಂಜುನಾಥ್ ರಾವ್ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಬಂದಿದೆ. ಹೀಗಾಗಿ ಮಧ್ಯಾಹ್ನ 12.30ರ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ.
ಇನ್ನು ಅಂತಿಮ ದರ್ಶನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಸಿದ್ಧತೆ ಮಾಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯವಾಗಿರುವುದರಿಂದ ಮೃತದೇಹ ಬರುವುದು ತಡವಾಗಿದೆ. ಮಂಜುನಾಥ್ ನಿಧನಕ್ಕೆ ಸಂತಾಪ ಸೂಚಿಸಿ, ಅರ್ಧ ದಿನ ಶಿವಮೊಗ್ಗ ಬಂದ್ ಮಾಡಲು ವರ್ತಕರು, ಹೊಟೇಲ್ ಮಾಲೀಕರು ತೀರ್ಮಾನ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು..
ಇತ್ತ ಉಗ್ರರ ದಾಳಿಗೆ ಬಲಿಯಾದ ಬೆಂಗಳೂರಿನ ಭರತ್ ಭೂಷಣ್ ಅಂತ್ಯಕ್ರಿಯೆ ಗುರುವಾರ ಹೆಬ್ಟಾಳ ಚಿತಾಗಾರದಲ್ಲಿ ನಡೆಯಲಿದೆ ಎಂದು ಭೂಷಣ್ ಸೋದರ ಮಾವ ನೀಡಿದ್ದಾರೆ.
UPSC Rank: ಯುಪಿಎಸ್‌ಸಿಯಲ್ಲಿ ರ್‍ಯಾಂಕ್. ಕುರಿ ಜತೆ ಕುಣಿದು ಕುಪ್ಪಳಿಸಿದ ಬೀರಪ್ಪ