newsics.com
ಬೆಳಗಾವಿ: ಕುರಿ ಕಾಯುವಾಗಲೇ ಯುಪಿಎಸ್‌ಸಿ ಫಲಿತಾಂಶ ಬಂದಿದ್ದು, ಅತ್ಯುತ್ತಮ ಶ್ರೇಯಾಂಕ ಸಿಕ್ಕಿದೆ ಎಂದು ಗೊತ್ತಾಗಿದ್ದೇ ತಡ ಕುರಿಯ ಜತೆಗೆ ಕುಣಿದು ಕುಪ್ಪಳಿಸಿದ್ದಲ್ಲದೇ ಮನೆ ಮಂದಿ ಜತೆಗೆ ಸಂಭ್ರಮಿಸಿದ ಅಪರೂಪದ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಕಾಗಲ್ ತಾಲೂಕಿನ ಎಗಲ್ ಗ್ರಾಮದ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ್‍ಯಾಂಕ್ ಪಡೆದಿದ್ದಾನೆ.
ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ತೃತೀಯ ಪುತ್ರ ಬೀರಪ್ಪ ಸಿದ್ದಪ್ಪ ಡೋಣಿ ಕುರಿ ಕಾಯುತ್ತಿರುವಾಗಲೇ ಯುಪಿಎಸ್ಸಿ ಫಲಿತಾಂಶ ಬಂದಿದ್ದು, ತಾನು ಪಾಸಾದ ಸುದ್ದಿ ತಿಳಿದು ಕುಣಿದು ಕುಪ್ಪಳಿಸಿದ್ದಾನೆ.
ಬೀರಪ್ಪ ಅವರ ಸಾಧನೆಗೆ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಫಲಿತಾಂಶ ಬಂದ ತಕ್ಷಣ ಕುಟುಂಬಸ್ಥರು ಬೀರಪ್ಪ ಅವರಿಗೆ ಆರತಿ ಎತ್ತಿ ಹಾರ ಹಾಕಿ ಕೈಗೆ ಕುರಿ ಮರಿ ಕೊಟ್ಟು ಸ್ಮಾನಿಸಿದರು.
Gautam Gambhir Gets Death Threat ಗೌತಮ್ ಗಂಭೀರ್ ಗೆ ಜೀವ ಬೆದರಿಕೆ