newsics.com/ನ್ಯೂಸಿಕ್ಸ್
ದೇಶದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಜಂಟಿಯಾಗಿ ಅತ್ಯಾಕರ್ಷಕ ಯೋಜನೆಯೊಂದನ್ನು ಪರಿಚಯಿಸಿವೆ. ಅದೇ ‘ಬೀಮಾ ಸಖಿ ಯೋಜನೆ’. ಈ ಯೋಜನೆಯಡಿ ಮಹಿಳೆಯರು ಮನೆಯಲ್ಲೇ ಕುಳಿತು ಪ್ರತಿ ತಿಂಗಳು 7,000 ರೂಪಾಯಿಗಳವರೆಗೆ ಸ್ಥಿರ ಆದಾಯ ಗಳಿಸುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.
ಮಹಿಳೆಯರನ್ನು ಎಲ್‌ಐಸಿ ಏಜೆಂಟರನ್ನಾಗಿ ಮಾಡುವ ಮೂಲಕ ಅವರಿಗೆ ಉದ್ಯೋಗಾವಕಾಶ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಆಯ್ಕೆಯಾಗುವ ಮಹಿಳೆಯರಿಗೆ ಇನ್ಶೂರೆನ್ಸ್ ಉತ್ಪನ್ನಗಳು, ವಿಮಾ ಸೇವೆಗಳು ಮತ್ತು ಆರ್ಥಿಕ ಸಾಕ್ಷರತೆಯ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತದೆ.
ಮೂರು ವರ್ಷಗಳ ಕಾಲ ಕೈತುಂಬಾ ಸ್ಟೈಫಂಡ್!
ಈ ಯೋಜನೆಯಡಿ ಆಯ್ಕೆಯಾಗುವ ಮಹಿಳೆಯರಿಗೆ ತರಬೇತಿಯ ನಂತರ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ಜೊತೆಗೆ ಮೊದಲ ಮೂರು ವರ್ಷಗಳ ಕಾಲ ಮಾಸಿಕ ಸ್ಟೈಫಂಡ್ (Stipend) ಸಿಗಲಿದೆ:
ಮೊದಲ ವರ್ಷ: ಪ್ರತಿ ತಿಂಗಳು ₹7,000 ಸ್ಟೈಫಂಡ್.
ಎರಡನೇ ವರ್ಷ: ಪ್ರತಿ ತಿಂಗಳು ₹6,000 ಸ್ಟೈಫಂಡ್.
ಮೂರನೇ ವರ್ಷ: ಪ್ರತಿ ತಿಂಗಳು ₹5,000 ಸ್ಟೈಫಂಡ್.
ವಿಶೇಷ ಸೂಚನೆ: ಈ ಮಾಸಿಕ ಸ್ಟೈಫಂಡ್ ಮಾತ್ರವಲ್ಲದೆ, ನೀವು ಮಾರಾಟ ಮಾಡುವ ಪ್ರತಿ ಎಲ್‌ಐಸಿ ಪಾಲಿಸಿಗಳ ಮೇಲೆಯೂ ಆಕರ್ಷಕ ಕಮಿಷನ್ ಪಡೆಯಬಹುದು. ಮೂರು ವರ್ಷಗಳ ನಂತರವೂ ಸ್ಟೈಫಂಡ್ ಮುಂದುವರಿಯಬೇಕಾದರೆ, ಎಲ್‌ಐಸಿ ನಿಗದಿಪಡಿಸುವ ಕೆಲವು ಬಿಸಿನೆಸ್ ಟಾರ್ಗೆಟ್‌ಗಳನ್ನು ತಲುಪಬೇಕಾಗುತ್ತದೆ.
ಅರ್ಹತಾ ಮಾನದಂಡಗಳು ಏನೇನು?
ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ವಯೋಮಿತಿ: 18 ರಿಂದ 70 ವರ್ಷಗಳ ನಡುವೆ ಇರಬೇಕು.
ವಿದ್ಯಾಹರತೆ: ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು.
ಷರತ್ತುಗಳು: ಅರ್ಜಿದಾರರು ಈ ಹಿಂದೆ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಿರಬಾರದು. ಅಲ್ಲದೆ, ಪ್ರಸ್ತುತ ಎಲ್‌ಐಸಿ ನೌಕರರು ಅಥವಾ ಏಜೆಂಟರ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗೆ ಈ ಯೋಜನೆಯಡಿ ಅವಕಾಶವಿರುವುದಿಲ್ಲ.
ಪರೀಕ್ಷೆ: ಏಜೆಂಟ್ ಆಗಿ ನೇಮಕಗೊಳ್ಳುವ ಮುನ್ನ IRDAI ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಬೇಕಾಗುವ ದಾಖಲೆಗಳು:
ಆಸಕ್ತ ಮಹಿಳೆಯರು ಎಲ್‌ಐಸಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್ (Aadhaar Card)
ವಿದ್ಯಾಹರತೆ ಪ್ರಮಾಣಪತ್ರ (10th Marks Card)
ವಿಳಾಸದ ಪುರಾವೆ (Address Proof)
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳು
ಆಯ್ಕೆ ಪ್ರಕ್ರಿಯೆ:
ನೀವು ಸಲ್ಲಿಸಿದ ಅರ್ಜಿಯನ್ನು ಎಲ್‌ಐಸಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ನೀವು ಅರ್ಹರಾಗಿದ್ದರೆ, ಫೋನ್ ಅಥವಾ ಇಮೇಲ್ ಮೂಲಕ ನಿಮಗೆ ಮಾಹಿತಿ ನೀಡಲಾಗುತ್ತದೆ. ತದನಂತರ ತರಬೇತಿ ನೀಡಿ, ಪರೀಕ್ಷೆಯ ಬಳಿಕ ಅಧಿಕೃತ ಎಲ್‌ಐಸಿ ಏಜೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?