newsics.com
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಇದರಲ್ಲಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಗ ಶೇಕಡಾ 98 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ ಸಂತಸದಲ್ಲಿ ಮಂಜುನಾಥ್ ಅವರು ಪತ್ನಿ ಪಲ್ಲವಿ ಮತ್ತು ಪುತ್ರ ಅಭಿ ಜೈ ಜೊತೆಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಪ್ರವಾಸದಲ್ಲಿ ಮಗನ ಕಣ್ಣ ಮುಂದೆಯೇ ಉಗ್ರರು ತಂದೆಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಉಗ್ರರು ಬಂದು ಹೆಸರು ಕೇಳಿ ಹಿಂದೂ ಅಂತ ಗೊತ್ತಾದ ಬಳಿಕ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ.
ಕಣ್ಮುಂದೆಯೇ ಅಪ್ಪನನ್ನು ಕೊಂದ ಉಗ್ರರಿಗೆ ಅಭಿ ಈ ಮಾತನ್ನು ಹೇಳಿದ್ದಾರೆ. ಈ ಬಗ್ಗೆ ಮೃತ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮದವರ ಜೊತೆ ಹೇಳಿದ್ದಾರೆ. “ನಮ್ಮ ಅಪ್ಪನನ್ನು ಕೊಂದಿದ್ಯಾ, ಕುತ್ತೆ ನಮ್ಮನ್ನು ಕೊಂದುಬಿಡು” ಅಂತ ಹೇಳಿದ್ದರಂತೆ. ಕಣ್ಮುಂದೆಯೇ ಗನ್ ಹಿಡಿದುಕೊಂಡು ನಿಂತಿದ್ದ ಉಗ್ರರಿದ್ದರು ಕುತ್ತೆ ಅಂತ ಧೈರ್ಯವಾಗಿ ಹೇಳಿರೋದು ನಿಜಕ್ಕೂ ಆ ಯುವಕನ ಧೈರ್ಯ ಎಂಥದ್ದು ಅಂತ ಸಾಬೀತಾಗಿದೆ.