newsics.com
ಶ್ರೀನಗರ: ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಮತ್ತು ಈ ಬೇಸಿಗೆಯ ಮೂನಾರ್ಲ್ಕು ತಿಂಗಳು ಹಿಮಪಾತವಾಗುತ್ತದೆ. ಹಿಮಚ್ಛಾದಿತ ಶಿಖರ, ಕಣಿವೆಗಳನ್ನು ನೋಡಲು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಆದರೆ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ
ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಇದರ ಪರಿಣಾಮವಾಗಿ ಇಬ್ಬರು ಕನ್ನಡಿಗರು ಸೇರಿ ಒಟ್ಟು 27 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರೆ.
ರಜೆಯ ಮಜಾ ಸವಿಯಲು ತಮ್ಮ ಕುಟುಂಬದೊಂದಿಗೆ ಬಂದಿದ್ದ, ಹನಿಮೂನ್ಗೆಂದು ಬಂದಿದ್ದ ನವಜೋಡಿಗಳಿಗೆ ಈ ದಿನ ಕರಾಳ ದಿನವಾಗಿ ಮಾರ್ಪಟ್ಟಿದೆ.
ಇನ್ನು ಭಾರತೀಯ ನೌಕಾಸೇನೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಮೂಲತಃ ಹರ್ಯಾಣದವರಾಗಿರುವ ವಿನಯ್ ನರ್ವಾಲ್.
ಮೂಲಗಳ ಪ್ರಕಾರಏಪ್ರಿಲ್ 16 ರಂದು ಮದುವೆಯಾಗಿದ್ದ ನವ ದಂಪತಿಗಳು ಪಹಲ್ಗಾಮ್‌ನಲ್ಲಿ ಹನಿಮೂನ್‌ಗೆ ತೆರಳಿದ್ದರು ಎನ್ನಲಾಗಿದೆ. ಮದುವೆ ಆದ ಆರನೇ ದಿನಕ್ಕೆ ಅಂತ್ಯ ಕಂಡಿದ್ದಾರೆ. ಇನ್ನು ಪತ್ನಿಯ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.