Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Pope Francis ಕನಸಾಗಿಯೇ ಉಳಿಯಿತು ಪೋಪ್‌ ಫ್ರಾನ್ಸಿಸ್‌ ಭಾರತ ಭೇಟಿ
ವಿದೇಶ

Pope Francis ಕನಸಾಗಿಯೇ ಉಳಿಯಿತು ಪೋಪ್‌ ಫ್ರಾನ್ಸಿಸ್‌ ಭಾರತ ಭೇಟಿ

Share
2 Min Read
SHARE

newsics.com

ನವದೆಹಲಿ: ರೋಮನ್ ಕ್ಯಾಥೋಲಿಕ್‌ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ಇಂದು ನಿಧನರಾಗಿದ್ದಾರೆ. ಇದರಿಂದ ಅವರು ‌ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.

2021 ಮತ್ತು 2024ರಲ್ಲಿ ಎರಡು ಬಾರಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು. ಮೋದಿ ಅವರ ಆಹ್ವಾನವನ್ನು ಅವರು ಸ್ವೀಕರಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ವ್ಯಾಟಿಕನ್ ಸಿಟಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪೋಪ್ ಫ್ರಾನ್ಸಿಸ್ 2025ರ ನಂತರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದರು.

1999ರಲ್ಲಿ ಪೋಪ್ ಜಾನ್ ಪಾಲ್ II ಅವರು ಕೊನೆಯದಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಏಷ್ಯಾದ ಬಿಷಪ್‌ಗಳ ಸಿನೊಡ್‌ನ ವಿಶೇಷ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲು ನವದೆಹಲಿಗೆ ಬಂದಿದ್ದ ಅವರು, ಆಗಿನ ಉಪರಾಷ್ಟ್ರಪತಿ ಕೃಷ್ಣಕಾಂತ್ ಮತ್ತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು.

ಇದಕ್ಕೂ ಮೊದಲು ಪೋಪ್ ಜಾನ್ ಪಾಲ್ II ಅವರು 1986ರ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದ ಅವರು ಕೊಲ್ಕತ್ತದ ಮಿಷನರೀಸ್ ಆಫ್ ಚಾರಿಟಿಗೆ ಭೇಟಿ ನೀಡಿದ್ದರು. ಅಲ್ಲದೇ ದೇಶದ ಪ್ರಮುಖ ನಾಯಕರನ್ನೂ ಭೇಟಿಯಾಗಿದ್ದರು.

ಭಾರತಕ್ಕೆ ಭೇಟಿ ನೀಡಿದ ಮೊದಲ ಪೋಪ್‌ ಪಾಲ್ IV. ಇವರು 1964ರಲ್ಲಿ ಅಂತರರಾಷ್ಟ್ರೀಯ ಯೂಕರಿಸ್ಟಿಕ್ ಕಾಂಗ್ರೆಸ್‌ನಲ್ಲಿ (International Eucharistic Congress) ಭಾಗವಹಿಸಲು ಮುಂಬೈಗೆ ಭೇಟಿ ನೀಡಿದ್ದರು.

2021ರ ಅಕ್ಟೋಬರ್‌ನಲ್ಲಿ ರೋಮ್‌ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು.

ಬಳಿಕ 2024ರ ಜೂನ್‌ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಮತ್ತೆ ಆಹ್ವಾನಿಸಿದ್ದರು.

ಪೋಪ್‌ ಹುದ್ದೆಗೇರಿದ ಲ್ಯಾಟಿನ್‌ ಅಮೆರಿಕದ ಮೊದಲ ಧರ್ಮಗುರು ಎನಿಸಿರುವ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 7.35ಕ್ಕೆ ಅವರು ನಿಧನರಾದರು ಎಂದು ವ್ಯಾಟಿಕನ್‌ನ ಪ್ರಕಟಣೆ ತಿಳಿಸಿದೆ.

Pope Francis: ಪೋಪ್‌ ನಿಧನದ ಬಳಿಕ ವ್ಯಾಟಿಕನ್‌ ನ ಸಂಪ್ರದಾಯಗಳೇನು?

TAGGED:Pope Francis' visit to India remained a dream
Share This Article
Facebook Twitter Copy Link Print
Previous Article Pope Francis: ಪೋಪ್‌ ನಿಧನದ ಬಳಿಕ ವ್ಯಾಟಿಕನ್‌ ನ ಸಂಪ್ರದಾಯಗಳೇನು?
Next Article Viral video ಯೋಧನ ಮೇಲೆ ಹಲ್ಲೆ ಕೇಸ್‌ಗೆ ಟ್ವಿಸ್ಟ್;‌ ಪೊಲೀಸರ ಹೇಳಿಕೆಯಲ್ಲಿ ಬಯಲಾಯಿತು ಸತ್ಯಾಂಶ, ವೈರಲ್ ವಿಡಿಯೋ ನೋಡಿ

Popular Posts

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

You Might Also Like

ದೇಶಪ್ರಮುಖವಿದೇಶವೈರಲ್

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read
ವಿದೇಶ

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?