newsics.com
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ..
ಕೊಂಚ ಶೀತ ನೆಗಡಿ ತಲೆನೋವು ಜ್ವರ ಕಾಣಿಸಿಕೊಂಡರು ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ..
ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ. ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ. ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಈ ಮಾತ್ರೆಯನ್ನು ಪದೇ ಪದೇ ಸೇವಿಸುವುದರಿಂದ ಅಥವಾ ಅತಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಅಲರ್ಜಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇಷ್ಟೇ ಅಲ್ಲ, ಈ ಔಷಧಿಯನ್ನು ನಿರಂತರವಾಗಿ ಸೇವಿಸುವುದರಿಂದ ಲಿವರ್ ಮತ್ತು ಕಿಡ್ನಿಗಳಲ್ಲಿ ಕೂಡ ಗಂಭೀರ ಸಮಸ್ಯೆಗಳು ಉಂಟಾಗಬಹುದಂತೆ.
ಇನ್ನೂ ಆತಂಕದ ವಿಚಾರ ಏನೆಂದ್ರೆಈ ಔಷಧಿಯ ಮಿತಿಮೀರಿದ ಸೇವನೆಯು ತೀವ್ರವಾದ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗ ಬಹುದು ಎಂದು ಅನೇಕ ತನಿಖೆಗಳ ಮೂಲಕ ಸಾಬೀತಾಗಿದೆ. ಹೀಗಾಗಿ ಮಾತ್ರೆಗಳಿಂದ ಆರೋಗ್ಯದ ಮೇಲೆ ಗಂಭೀರವಾದ ಅಡ್ಡಪರಿಣಾಮಗಳು ಕಂಡುಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.
ವೈದ್ಯರು ಸಲಹೆ ನೀಡಿದರೆ ಮಾತ್ರೆ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಸಣ್ಣಗೆ ಜ್ವರ ಇದ್ದರೆ ಮಾತ್ರೆಯ ಬದಲು ಮನೆಮದ್ದುಗಳ ಮೂಲಕ ಗುಣಪಡಿಸಬೇಕು. ತಲೆನೋವು ಶೀತ ಮೈಕ ನೋವಿಗೆ ಮಾತ್ರೆಯ ಬದಲು ಮನೆಮದ್ದುಗಳು ಇಲ್ಲಾಂದ್ರೆ ಆಯುರ್ವೇದ ಪರಿಹಾರಗಳನ್ನು ಅನುಸರಿಸಬೇಕು. ನಿಮಗೆ ಗೊತ್ತಿರಲಿ ನಿರಂತರವಾಗಿ ಸೇವಿಸಿದರೆ ಸ್ವಲ್ಪ ಸಮಯದ ನಂತರ ಈ ಔಷಧಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅದರ ನಂತರ ಈ ಔಷಧಿಯನ್ನು ತೆಗೆದುಕೊಳ್ಳಬಾರದು.ಅದು ಕೆಲಸ ಮಾಡದಿದ್ದರೂ ಸಹ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು.