newsics.com
ಬೆಂಗಳೂರು: ಮಾಜಿ ಡಿಜಿ ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಪುತ್ರಿ ಕೃತಿ ತಲೆನೋವಾಗಿದ್ದಾಳೆ. ತಮ್ಮ ತಂದೆಯ ಹತ್ಯೆ ಬಳಿಕ ಮಗಳು ಕೃತಿ ಸ್ಥಳದಿಂದ ಓಡಿ ಹೋಗಿದ್ದಳು. ಪೊಲೀಸರು ಬಂದಾಗ ಪತ್ನಿ ಪಲ್ಲವಿ ಮಗಳು ಕಾಣಿಸುತ್ತಿಲ್ಲ ಎಂದಿದ್ದರು. ಹೀಗಾಗಿ ಪೊಲೀಸರು ಮಗಳ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದರು. ಆಗ HSR ಲೇಔಟ್ ನ ಬಾರ್ ಒಂದರಲ್ಲಿರುವುದು ತಿಳಿಯಿತು.
ಮದ್ಯಪಾನ ಮಾಡುತ್ತಾ ಕುಳಿತಿದ್ದ ಕೃತಿಯನ್ನು ಕರೆತಂದ ಪೊಲೀಸರು ಬಳಿಕ ಸೈಂಟ್ ಜಾನ್ಸ್ ಆಸ್ಪತ್ರೆಗೆ ಮೆಡಿಕಲ್ ಚೆಕ್ ಅಪ್ ಗೆ ಕರೆದುಕೊಂಡು ಹೋದರು. ಈ ವೇಳೆ ಮಹಿಳಾ ಕಾನ್ಸ್ಟೇಬಲ್ ಮೇಲೆ ಕೃತಿ ಹಲ್ಲೆ ಮಾಡಿದ್ದು, ಉಗುರಿನಿಂದ ಪರಚಿದ್ದಳು. ಬಳಿಕ ಮೆಡಿಕಲ್ ಚೆಕ್ ಅಪ್ ಗೂ ಸರಿಯಾಗಿ ಸ್ಪಂದಿಸಲಿಲ್ಲ. ಮತ್ತಿನಲ್ಲಿ ಇದ್ದುದರಿಂದ ಪೊಲೀಸರ ಮೇಲೆ ರೇಗಾಡಿದ್ದಳು. ಇದರಿಂದಾಗಿ ಕೃತಿಯನ್ನು ಸೈಂಟ್ ಜಾನ್ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಪೊಲೀಸರು ಬಿಟ್ಟು ಬಂದಿದ್ದರು.
ಇಂದು ಬೆಳಗ್ಗೆ HSR ಲೇಔಟ್ ಪೊಲೀಸ್ ಠಾಣೆಗೆ ಕರೆತಂದಾಗಲೂ ವ್ಯಾನ್ ನಿಂದ ಇಳಿಯಲು ನಕಾರ ಮಾಡಿದ್ದಾಳೆ. ಮಗಳು ಯಾವುದೇ ತಪ್ಪು ಮಾಡಿಲ್ಲ, ಅವಳನ್ನು ಬಿಟ್ಟು ಬಿಡಿ ಎಂದು ತಾಯಿ ಪಲ್ಲವಿ ಹೇಳಿದ್ದಾರೆ.
ಇನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪೊಲೀಸರ ಪ್ರತಿ ಪ್ರಶ್ನೆಗೂ ಡೋಂಟ್ ಆಸ್ಕ್ ಮಿ ಎಂದು ಕಿರಿಕಿರಿ ಮಾಡಿದ್ದರು. ಹೀಗಾಗಿ ಆಕೆಯನ್ನು ಸಮಾಧಾನಪಡಿಸಲು ಪೊಲೀಸರು ಕೃತಿ ಸ್ನೇಹಿತೆಯರನ್ನ ಕರೆಸಿದ್ದಾರೆ.
ಹೆಚ್ ಎಸ್ ಆರ್ ಠಾಣೆಯಲ್ಲಿ ಪೊಲೀಸರು ಆರೋಪಿಗಳ ಫಿಂಗರ್ ಪ್ರಿಂಟ್ ಪಡೆದುಕೊಂಡಿದ್ದಾರೆ. FSL ಬೆರಳಚ್ಚು ತಜ್ಞರಿಂದ ಪಲ್ಲವಿ ,ಕೃತಿ ಬೆರಳಚ್ಚು ಸಂಗ್ರಹಿಸಿದ್ದಾರೆ. ಕೊಲೆ ಮಾಡಿದ ಚಾಕು ಹಾಗೂ ಮೃತದೇಹದ ಮೇಲೆ ಇರುವ ಬೆರಳಚ್ಚು ಸಂಗ್ರಹ ಮಾಡಿದ್ದರು. ಹೀಗಾಗಿ ಹೆಚ್ ಎಸ್ ಆರ್ ಠಾಣೆಯಲ್ಲಿ ತಾಯಿ ಮಗಳ ಬೆರಳಚ್ಟು ತೆಗೆದುಕೊಂಡಿದ್ದಾರೆ. ಇನ್ನು ಎಫ್ಎಸ್ ಎಲ್ ತಂಡ ಆರೋಪಿಗಳ ಫಿಂಗರ್ ಪ್ರಿಂಟ್ ಪಡೆಯುವ ವೇಳೆ ಮಗಳು ಕೃತಿ ಫಿಂಗರ್ ಫ್ರಿಂಟ್ ನೀಡಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆ ಫಿಂಗರ್ ಫ್ರಿಂಟ್ ಪಡೆಯಲು ಎಸಿಪಿ ನೇತೃತ್ವದ ಟೀಂ ವಿಚಾರಣಾಧೀನ ಕೊಠಡಿಗೆ ತೆರಳಿ ವಿಡಿಯೋ ಮೂಲಕ ರೆಕಾರ್ಡ್ ಮಾಡಿಕೊಂಡಿದೆ.