newsics.com
ಗದಗ: ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಸಂಕೇತವಾಗಿರುವ ‘ಪಟ್ಟೇದ ಅಂಚು’ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ದೊರೆತಿದೆ.
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಈ ಟ್ಯಾಗ್ ಲಭಿಸಿದೆ.
ಉತ್ತರ ಕರ್ನಾಟಕದ ಇಳಕಲ್, ಬೆಟಗೇರಿ, ಗಜೇಂದ್ರಗಡ ಮತ್ತು ಇತರ ಭಾಗಗಳಿಂದ ಬರುವ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಮಹಿಳೆಯರಲ್ಲಿ, ವಿಶೇಷವಾಗಿ ಮದುವೆಯ ಋತುವಿನಲ್ಲಿ ಭಾರೀ ಆಕರ್ಷಣೆಯಾಗಿದೆ. ಈ ಮನ್ನಣೆಯು ನುರಿತ ನೇಕಾರರು ವೃತ್ತಿಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ.
ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ (ಆರ್‌ಸಿಐಪಿಆರ್) ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಿಂದ (ವಿಟಿಪಿಸಿ) ಜಿಐ ಟ್ಯಾಗ್ ನೋಂದಣಿ ಮಾಡಲಾಗಿದೆ.
ಗಜೇಂದ್ರಗಡದ ನೇಕಾರರು ಈ ಮಾನ್ಯತೆಯಿಂದ ಸಂತೋಷಗೊಂಡಿದ್ದಾರೆ. ನಮ್ಮ ಪಟ್ಟೇದ ಅಂಚು ಸೀರೆಗಳಿಗೆ ಭೌಗೋಳಿಕ ಸೂಚನಾ ಟ್ಯಾಗ್ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ ಎಂದಿದ್ದಾರೆ.
860ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದರೂ ಜೀವನ ನಡೆಸೋದೇ ಕಷ್ಟ ಆಗಿತ್ತು
Gold Rate ಚಿನ್ನ ಪ್ರಿಯರಿಗೆ ಭರ್ಜರಿ ಸುದ್ದಿ :ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ