newsics.com
ಮಸೀದಿಗಳಲ್ಲಿ ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಆದರೆ ಈ ಒಂದು ತಪ್ಪಿನಿಂದ
ರಾತ್ರಿ ಮಸೀದಿಯ ಮೈಕ್‌ನಿಂದ ಕೇಳಿದ ಧ್ವನಿಗೆ ಜನರು ಗಾಬರಿಗೊಂಡಿದ್ದಾರೆ.
ಈ ವಿಡಿಯೋದಲ್ಲಿ ರಾತ್ರಿ ಜನವಸತಿ ಪ್ರದೇಶದ ದೃಶ್ಯವನ್ನು ನೋಡಬಹುದು. ಬ್ಯಾಕ್‌ಗ್ರೌಂಡ್‌ನಲ್ಲಿ ನಿಮಗೆ ಕರ್ಕಶವಾದ ಧ್ವನಿಯೊಂದು ಕೇಳಿಸುತ್ತದೆ. ಒಂದು ಕ್ಷಣ ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು ಆ ಧ್ವನಿ ಕರ್ಕಶವಾಗಿರುತ್ತದೆ. ಒಂದು ಕ್ಷಣ ಅದು ಗೊರಕೆಯ ಸದ್ದು ಎಂದು ಗೊತ್ತಾಗುತ್ತದೆ. ಮಸೀದಿಯ ಮೈಕ್ ಆಪ್ ಮಾಡದಿರೋ ಕಾರಣ, ರಾತ್ರಿ ಅಲ್ಲಿ ಮಲಗಿರೋರ ಗೊರಕೆ ಸದ್ದು ಮೈಕ್ ಮೂಲಕ ಎಲ್ಲರಿಗೂ ಕೇಳಿಸಿದೆ. ಸದ್ಯ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಅರ್ನೊಲ್ಡ್ ಶಲ್ವಾರ್ ನಿಕ್ಕರ್ (@Calakand) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ
.