newsics.com | ನ್ಯೂಸಿಕ್ಸ್
ರೈಲು ಪ್ರಯಾಣದಲ್ಲಿ ನಾವು ತೋರುವ ಸಣ್ಣ ನಿರ್ಲಕ್ಷ್ಯವೂ ನಮ್ಮ ಜೀವಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಿಲ್ದಾಣಗಳಲ್ಲಿ ಕೆಲವೇ ಕ್ಷಣ ನಿಲ್ಲುವ ರೈಲುಗಳಿಂದ ಇಳಿಯುವ ಮುನ್ನ ನೂರು ಬಾರಿ ಯೋಚಿಸಬೇಕು. ಸದ್ಯ ಇಂತಹದ್ದೇ ಒಂದು ಗಡಿಬಿಡಿಯ ನಿರ್ಧಾರದಿಂದ ಬಾಲಕಿಯೊಬ್ಬಳು ರೈಲಿನಡಿ ಬಿದ್ದು ದುರ್ಮರಣ ಹೊಂದಿರುವ ಭೀಕರ ದೃಶ್ಯದ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಬಾಲಕಿ ತನ್ನ ಕುಟುಂಬಸ್ಥರ ಜೊತೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಳು. ರೈಲು ಒಂದು ನಿಲ್ದಾಣದಲ್ಲಿ ಬಂದು ನಿಂತಾಗ, ಏನನ್ನೋ ತಿನ್ನಬೇಕೆಂಬ ಆಸೆಯಿಂದ ಆಕೆ ಕೆಳಗಿಳಿದಿದ್ದಾಳೆ. ಆದರೆ ಆ ನಿಲ್ದಾಣದಲ್ಲಿ ರೈಲು ಬಹಳ ಕಡಿಮೆ ಅವಧಿಗೆ ಮಾತ್ರ ನಿಲ್ಲುತ್ತದೆ ಎಂಬ ಅರಿವು ಆಕೆಗಿರಲಿಲ್ಲ.
ಅಂಗಡಿಯಲ್ಲಿ ತಿಂಡಿ ತೆಗೆದುಕೊಂಡು ಅದಕ್ಕೆ ಮೊಬೈಲ್ ಮೂಲಕ ಹಣ ಪಾವತಿಸಲು ಮುಂದಾಗಿದ್ದಾಳೆ. ದುರದೃಷ್ಟವಶಾತ್ ಸಿಗ್ನಲ್ ಸಮಸ್ಯೆಯಿಂದಾಗಿ ಆನ್‌ಲೈನ್ ಟ್ರಾನ್ಸಾಕ್ಷನ್ ತಡವಾಗಿದೆ. ಇತ್ತ ಸಮಯ ಮೀರುತ್ತಿರುವುದನ್ನು ಕಂಡು ಆಕೆಗೆ ಗಾಬರಿಯಾಗಿದೆ. ಅಷ್ಟರಲ್ಲೇ ರೈಲು ನಿಧಾನವಾಗಿ ಮುಂದಕ್ಕೆ ಚಲಿಸಲು ಆರಂಭಿಸಿದೆ.
ರೈಲು ಚಲಿಸುತ್ತಿರುವುದನ್ನು ಕಂಡು ಕಂಗೆಟ್ಟ ಆಕೆ, ಕೈಲಿದ್ದ ತಿಂಡಿಯನ್ನು ಅಲ್ಲೇ ಎಸೆದು ರೈಲಿನತ್ತ ಧಾವಿಸಿದ್ದಾಳೆ. ಆದರೆ ಅಷ್ಟರಲ್ಲಾಗಲೇ ರೈಲು ವೇಗ ಪಡೆದುಕೊಂಡಿತ್ತು. ಹೇಗಾದರೂ ಮಾಡಿ ಬೋಗಿ ಒಳಗೆ ಸೇರಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಆಕೆ, ಓಡುತ್ತಲೇ ಬಾಗಿಲ ಸರಳನ್ನು ಹಿಡಿಯಲು ಯತ್ನಿಸಿದ್ದಾಳೆ.
ಆದರೆ ಚಲಿಸುತ್ತಿದ್ದ ರೈಲಿನ ವೇಗಕ್ಕೆ ಸಮನಾಗಿ ಓಡಲಾಗದೆ ಆಕೆ ನಿಯಂತ್ರಣ ಕಳೆದುಕೊಂಡು ಪ್ಲಾಟ್‌ಫಾರ್ಮ್ ಹಾಗೂ ರೈಲು ಹಳಿಯ ಮಧ್ಯದ ಕಿರಿದಾದ ಜಾಗಕ್ಕೆ ಜಾರಿ ಬಿದ್ದಿದ್ದಾಳೆ. ಅಲ್ಲಿದ್ದವರು ತಕ್ಷಣವೇ ಆಕೆಯನ್ನು ಬದುಕಿಸಲು ಓಡಿ ಬಂದರಾದರೂ, ಅಷ್ಟರಲ್ಲಾಗಲೇ ಆಕೆ ರೈಲಿನ ಚಕ್ರಗಳ ಅಡಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾಳೆ.
ये वीडियो देख कर सबक लिया जा सकता है
जब भी ट्रेन से सफर करें अपने बच्चों को अकेला न छोड़ेये लड़की ट्रेन से उतरी कुछ स्नैक लेने के लिए
उसे नहीं पता था यह गाड़ी ज्यादा देर के लिए रुकेगीउसने स्नैक ले लिया लेकिन पेमेंट उसे गूगल पे से करना था शायद
उसने पेमेंट करना चाहा लेकिन… pic.twitter.com/ktAMLGR6eU
— Ashraf (@ASHRAFH58203689) July 19, 2026
Chardham Yatra Updates | ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ