newsics.com
ತಿರುವನಂತಪುರಂ: ನಂಬರ್ ಪ್ಲೇಟ್ ತಯಾರಿಸುವಾಗ ಮಹಿಳೆಯ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಿರುವ ಘಟನೆ ಕೇರಳದ ತೈಕಾಡ್ ಜಂಕ್ಷನ್ನಲ್ಲಿರುವ ನಂಬರ್ಪ್ಲೇಟ್ ಡಿಸೈನಿಂಗ್ ಅಂಗಡಿಯಲ್ಲಿ ನಡೆದಿದೆ. ಸಂಸ್ಥೆಯ ಉದ್ಯೋಗಿ ಅನೀಷಾ (24) ಅವರ ಬೆರಳು ಡಿಸೈನಿಂಗ್ ಯಂತ್ರದಲ್ಲಿ ಸಿಲುಕಿಕೊಂಡಿತ್ತು.
ಅನೀಷಾ ಅವರ ಬಲಗೈ ಬೆರಳು ಯಂತ್ರದಲ್ಲಿ ಸಿಲುಕಿಕೊಂಡಿದ್ದರಿಂದ ಹೊರತೆಗೆಯಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಹೈಡ್ರಾಲಿಕ್ ಕಟ್ಟರ್, ಆಂಗಲ್ ಕಟ್ಟರ್ ಬಳಸಿ ಅರ್ಧ ಗಂಟೆಗಳ ಕಾಲ ಪ್ರಯತ್ನಿಸಿ ಯಂತ್ರದಲ್ಲಿ ಸಿಲುಕಿದ್ದ ಬೆರಳನ್ನು ಹೊರತೆಗೆದರು. ಬೆರಳಿಗೆ ಗಾಯವಾಗಿ ಊತ ಬಂದಿದ್ದರಿಂದ ಅನೀಷಾ ಅವರನ್ನು ಅಗ್ನಿಶಾಮಕ ದಳದ ಆಂಬ್ಯುಲೆನ್ಸ್ನಲ್ಲಿ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.