newsics.com
ಬೆಂಗಳೂರು: ಗ್ರಾಮ ಪಂಚಾಯ್ತಿ ಸದಸ್ಯನ ಮನೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಬೆಂಗಳೂರು ಹೊರಹೊಲಯದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಹೀರೆಂಡಹಳ್ಳಿಯಲ್ಲಿ ಜರುಗಿದೆ.
ಬೆಂಕಿ ಅನಾಹುತದಲ್ಲಿ ಅದೃಷ್ಟವಶಾತ್ ಮನೆ ಮಂದಿ ಪಾರಾಗಿದ್ದಾರೆ.
ಐವತ್ತು ಲೀಟರ್ ಪೆಟ್ರೋಲ್ ಸುರಿದು ಪುಂಡರು ಬೆಂಕಿ ಹಚ್ಚಿದ್ದಾರೆ. ಬಿದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜಗನ್ನಾಥ್ ಎಂಬುವರ ಮನೆಗೆ ಬೆಂಕಿಗಾಗಿದೆ. ಸೋಮವಾರ ಕಿಡಿಗೇಡಿಗಳು ಮದ್ಯರಾತ್ರಿ ಎಂಟ್ರಿ ಕೊಟ್ಟಿದ್ದು, ಕಿಟಕಿಗಳ ಮೂಲಕ ಪೆಟ್ರೋಲ್ ಸುರಿದಿದ್ದಾರೆ. ಆ ಬಳಿಕ ಬೆಂಕಿ ಹಚ್ಚಿದ್ದು,ಮನೆ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ. ಇದೇ ವೇಳೆ ಮನೆ ಬಳಿ 10 ಲೀಟರ್ ಪೆಟ್ರೋಲ್ ಕ್ಯಾನ್ ಬಳಿಯೇ ಬಿಟ್ಟು ಪರಾರಿ ಆಗಿದ್ದಾರೆ.
ಇನ್ನು ಅವಘಡದ ವೇಳೆ ಸದಸ್ಯ ಜಗನ್ನಾಥ್ ಸೇರಿ ಪತ್ನಿ ಇಬ್ಬರು ಮಕ್ಕಳಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ಆವಲಹಳ್ಳಿ ಠಾಣೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.