newsics.com
ಸಿದ್ದಾಪುರ(ಉತ್ತರ ಕನ್ನಡ): ತಾಲೂಕಿನ ಗೊದ್ಲಬೀಳು ಗ್ರಾಮದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.ಸಿದ್ದಾಪುರ ತಾಲೂಕಿನ ಬಿದ್ರಕಾನ್ ಪಂಚಾಯತ ವ್ಯಾಪ್ತಿಯ ಗೊದ್ಲಬೀಳು ಗ್ರಾಮದ ಗೋಳಿಕೈ ಮಂಜುನಾಥ ಹೆಗಡೆ ಅವರ ಮನೆಯ ಹತ್ತಿರ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.ಮನೆಯ ಹತ್ತಿರ ತಡರಾತ್ರಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಮಾಝ್ ಸೈಯದ್ ಅರಣ್ಯ ಇಲಾಖೆಯ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.