newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಫಾಲ್ಗುಣ ಮಾಸ ಕೃಷ್ಣ ಪಕ್ಷ ತೃತೀಯ/ ಚತುರ್ಥಿ
17-03-2025, ಸೋಮವಾರ
# ಸಂಕಷ್ಟ ಹರ ಚತುರ್ಥಿ
# ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ (ತಿಥಿಗನುಸಾರ)
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 17/03/2025
ತಿಂಗಳು – ಮಾರ್ಚ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ತೃತೀಯ 19:32:32
ಪಕ್ಷ – ಕೃಷ್ಣ
ನಕ್ಷತ್ರ – ಚಿತ್ತ 14:46:08
ಯೋಗ – ಧ್ರುವ 15:43:57
ಕರಣ – ವಿಷ್ಟಿ (ಭದ್ರ) 19:32:31
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಚೈತ್ರ
ಚಂದ್ರ ರಾಶಿ – ತುಲಾ
ಸೂರ್ಯ ರಾಶಿ – ಮೀನ
ಋತು – ಶಿಶಿರ
ಸೂರ್ಯೋದಯ 06:26:49
ಸೂರ್ಯಾಸ್ತ 18:29:05
ಹಗಲಿನ ಅವಧಿ 12:02:15
ರಾತ್ರಿಯ ಅವಧಿ 11:57:05
ಚಂದ್ರಾಸ್ತ 08:06:09
ಚಂದ್ರೋದಯ 20:54:55
ರಾಹು ಕಾಲ 07:57 – 09:27 ಅಶುಭ
ಯಮಘಂಡ ಕಾಲ 10:58 – 12:28 ಅಶುಭ
ಗುಳಿಕ ಕಾಲ 13:58 – 15:29
ಅಭಿಜಿತ್ 12:04 – 12:52 ಶುಭ
ದುರ್ಮುಹೂರ್ತ 12:52 – 13:40 ಅಶುಭ
ದುರ್ಮುಹೂರ್ತ 15:16 – 16:05 ಅಶುಭ
—
ಇಂದಿನ ಮಾತು
ಒಳ್ಳೆಯ ನಿರ್ಧಾರಗಳು ಅನುಭವದಿಂದ ಬರುತ್ತವೆ; ಆದರೆ, ಒಬ್ಬ ವ್ಯಕ್ತಿಯ ಅನುಭವವು ಬಹುತೇಕ ಕೆಟ್ಟ ನಿರ್ಧಾರಗಳಿಂದಲೇ ಪರಿಪಕ್ವಗೊಂಡಿರುತ್ತದೆ.
– oîmmmmmîವಿಲ್ ರೋಜರ್
—
ಇಂದಿನ ಸುಭಾಷಿತ
ಹಸ್ತಸ್ಪರ್ಶಾದಿವಾಂಧೇನ
ವಿಷಮೇ ಪಥಿ ದಾವತಾ |
ಅನುಮಾನಪ್ರಧಾನೇನ
ವಿನಿಪಾತೋ ನ ದುರ್ಲಭಃ ॥
(ವಾಕ್ಯಪದೀಯ)
ಏರುತಗ್ಗುಗಳಿರುವ ದಾರಿಯಲ್ಲಿ ಕುರುಡನು ಕೈಮುಟ್ಟಿ ನೋಡುತ್ತ ಓಡುತ್ತಿದ್ದರೆ ಹೇಗೋ ಹಾಗೆ, ಊಹೆಯನ್ನೇ ಮುಖ್ಯವಾಗಿಟ್ಟುಕೊಂಡವನು ಮುಗ್ಗರಿಸಿ ಬೀಳುವುದು ನಿಶ್ಚಯ.
—
ಇಂದಿನ ಪದಾರ್ಥ
ಅಪಕೀರ್ತಿ = Censure , reproach
—
ಇಂದಿನ ಓದು
ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ |
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ ||7 ||
57) ಕೃಷ್ಣಃ
ಕೃಷ್ಣ ಎನ್ನುವುದು ಮೇಲ್ನೋಟಕ್ಕೆ ವಸುದೇವ ದೇವಕಿಯರಲ್ಲಿ ಅವತರಿಸಿದ ಭಗವಂತನ ಹೆಸರು. ಆದರೆ ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ ಹೌದು. ಗರ್ಗಾಚಾರ್ಯರು, ತಾಯಿ ಯಶೋದೆಯಲ್ಲಿ ಮಗುವಿನ ಹೆಸರಿಡುವಾಗ ಹೀಗೆ ಹೇಳುತ್ತಾರೆ- “ಈ ಮಗುವಿಗೆ ನಾನು ಹೆಸರಿಡುತ್ತಿಲ್ಲ. ಈ ಜಗತ್ತಿನಲ್ಲಿ ಇರುವ ಎಲ್ಲಾ ಹೆಸರೂ ಇವನದೇ, ಇವನಿಗೆ ಇರುವ ಹೆಸರನ್ನೇ ನಿಮಗೆ ನೆನಪಿಸುತ್ತಿದ್ದೇನೆ, ಈತ ಶ್ಯಾಮ, ಸುಂದರ, ವಾಸುದೇವ, ಶ್ರೀ ಕೃಷ್ಣ” ಎಂದು ಹೇಳಿ ನಾಮಕರಣ ಮಾಡುತ್ತಾರೆ. ಚತುರ್ವಂಶ ಮೂರ್ತಿಗಳಲ್ಲಿ ಇಪ್ಪತ್ನಾಲ್ಕನೆ ರೂಪವೂ “ಕೃಷ್ಣ”. ಧರ್ಮ ದೇವತೆಯಲ್ಲಿ ಹುಟ್ಟಿದ ಒಂದು ರೂಪ “ಕೃಷ್ಣ” (ನರ, ನಾರಾಯಣ, ಹರಿ, ಕೃಷ್ಣ). ಭಗವಂತನ ಸಹಸ್ರ ರೂಪದಲ್ಲಿ ಕೃಷ್ಣ ರೂಪ ಕೂಡಾ ಒಂದು.
***