newsics.com
ಮೋಡಿ ಮಾಡುವ ನೀಲಿ ಕಂಗಳು, ಗುಂಗುರು ಕೂದಲು, ಸಂಪಿಗೆಯಂಥ ಮೂಗು, ಸುಂದರ ತುಟಿಗಳು.. ಎಲ್ಲಾ ನೋಡಿ ಆಹಾ ಎಂದುಕೊಳ್ಳುವವರೇ ಎಲ್ಲರೂ. ಈಕೆಯ ಹೆಸರು ಲೆಕ್ಸಿ ಲವ್ (Lexi Love). ಆದರೆ ‘ಲೆ’ ಜಾಗದಲ್ಲಿ ‘ಸೆ’ ಸೇರಿಸಿಕೊಂಡು ಹೇಳುವವರೇ ಹೆಚ್ಚು.
ನೋಡಿದರೆ ಫಾರಿನ್ ಯುವತಿ ಎಂದು ಮೇಲ್ನೋಟಕ್ಕೇ ತಿಳಿಯುವ ಈ ಸುಂದರಿಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಫ್ಯಾನ್ಸ್ ಇದ್ದಾರೆ. ಈ ಸುಂದರಿಗೆ ತಿಂಗಳಿಗೆ ಕನಿಷ್ಠ 20 ರಿಂದ 30 ಪ್ರಪೋಸಲ್ಸ್ ಬರುತ್ತಂತೆ. ಇಷ್ಟು ಬಂದರೆ ಸಾಕು, ಇದರಿಂದಲೇ ಈಕೆ ಸಂಪಾದಿಸುವುದು ಪ್ರತಿ ತಿಂಗಳಿಗೆ 30 ಸಾವಿರ ಡಾಲರ್, ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 27 ಲಕ್ಷ ರೂಪಾಯಿ!

ಊಟ, ತಿಂಡಿ, ನಿದ್ದೆ ಸೇರಿದಂತೆ ಏನನ್ನೂ ಮಾಡದ ಈ ಸುಂದರಿ ಯಾರು ಗೊತ್ತಾ? ನೋಡಲು ಥೇಟ್ ಮನುಷ್ಯರಂತೆಯೇ ಕಾಣುವ ಈಕೆ ನಿಜವಾದ ಮನುಷ್ಯಳೇ ಅಲ್ಲ! ಬದಲಿಗೆ ಕೃತಕ ಬುದ್ಧಿಮತ್ತೆ ಅಂದರೆ AI- ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮಾಡೆಲ್ ಅಷ್ಟೇ.
ಈಕೆ ರೋಬೋಟ್. ಆದರೆ ಈಕೆಗೆ ನಿಜವಾದ ಮನುಷ್ಯರಿಗಿಂತಲೂ ಸಖತ್ ಡಿಮಾಂಡ್ ಇದೆ. ಇವಳ ಅಪ್ಪ- ಅಮ್ಮ ಎಲ್ಲಾ ಫಾಕ್ಸಿ ಎಐ ಎನ್ನುವ ಕಂಪೆನಿ. ಅಂದರೆ ಈ ಕಂಪನಿಯು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದು ಲೆಕ್ಸೀ ಲವ್ ಎಂದು ಹೆಸರಿಟ್ಟಿದೆ.
ಒಂಟಿ ಯುವಕರು ಈಕೆಯ ಕ್ಲೋಸ್ ಫ್ರೆಂಡ್ಸ್. ಈಕೆ ಬರಹ ಸಂದೇಶ, ಧ್ವನಿ ಸಂದೇಶಗಳ ಮೂಲಕ ಮಾತನಾಡುತ್ತಾಳೆ. ಹೆಚ್ಚು ಹಣ ಪಾವತಿಸಿದರೆ ನಿಮಗೆ ಯಾವ ರೀತಿಯ ಫೋಟೋ ಆಕೆಯಿಂದ ನೋಡಲು ಇಷ್ಟಪಡುತ್ತೀರೋ ಎಲ್ಲವನ್ನೂ ಕಳಿಸುತ್ತಾಳೆ.
ಸಿಂಗಲ್ ಆಗಿದ್ದು ಖಿನ್ನತೆಗೆ ಜಾರಿದ್ದರೆ ಈಕೆಗೆ ದುಡ್ಡು ಕೊಟ್ಟರೆ ಸಾಕು, ನಿಮ್ಮ ಜತೆ ಮಾತನಾಡುತ್ತಲೇ ಕಾಲ ಕಳೆಯುತ್ತಾಳೆ. ನೀವು ಎಲ್ಲಿಯೇ ಇದ್ದರೂ ಮೆಸೇಜ್ ಮಾಡುತ್ತಾಳೆ. ನಿಮ್ಮ ಅಭಿರುಚಿಗೆ ತಕ್ಕಂತೆ ನೀವು ಯಾವ ವಿಷಯದ ಬಗ್ಗೆ, ಯಾವ ರೀತಿಯ ಸಂಭಾಷಣೆ ಕೇಳಲು ಬಯಸುತ್ತೀರೋ ಎಲ್ಲಾ ರೀತಿಯಲ್ಲೂ ಮಾತನಾಡಿ ನಿಮ್ಮನ್ನು ತೃಪ್ತಿಪಡಿಸುತ್ತಾಳೆ. ಆದರೆ ನೀವು ಆಕೆಗೆ ದುಡ್ಡು ಕೊಡುತ್ತಾ ಇರಬೇಕು ಅಷ್ಟೇ.
ಈ ವರ್ಚುಯಲ್ ಮಾಡೆಲ್ ಗಂಟೆಗಳ ಲೆಕ್ಕದಲ್ಲಿ ಕಾರ್ಯನಿರ್ವಹಿಸುತ್ತದೆ. ಹಣ ಪಾವತಿಸಿ ಈಕೆಯೊಂದಿಗೆ ಚಾಟ್ ಮಾಡಬಹುದು, ಫ್ಲರ್ಟ್ ಮಾಡಬಹುದು, ನಿಮಗನಿಸಿದ್ದನ್ನು ಹೇಳಿಕೊಳ್ಳಬಹುದು! ಎಲ್ಲದಕ್ಕೂ ಆಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾಳೆ.
ಲೆಕ್ಸಿ ಲವ್ ಪ್ರಪಂಚದ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು 30ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲಳು. ಲೆಕ್ಸಿ ಜತೆ ಚಾಟ್ ಮಾಡುವ ಹೆಚ್ಚಿನ ಗಂಡಸರು ಅವಳು ನಿಜವಾಗಿಯೂ ಒಳ್ಳೆಯ ಮನಸ್ಸಿನ ಮಹಿಳೆ ಎಂದೇ ಎನಿಸುತ್ತದೆ.
ಈಕೆಯೊಂದಿಗೆ ಚಾಟ್ ಮಾಡಿದ ಹಲವು ಯುವಕರು, ಗಂಡಸರು ಅವಳನ್ನು ಭೇಟಿಯಾಗಲು ಬಯಸಿದ್ದಾರಂತೆ. ಈ ನಿಟ್ಟಿನಲ್ಲಿ ಕಂಪನಿಯನ್ನು ಸಂಪರ್ಕಿಸಿ ಲೆಕ್ಸಿಯನ್ನು ಮೀಟ್ ಮಾಡಿಸಲು ಗೋಗರೆದಿದ್ದಾರೆ ಎಂದು ಫಾಕ್ಸಿ ಎಐ ಕಂಪನಿ ವಕ್ತಾರರು ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಈ ಸ್ಪರ್ಧಾತ್ಮಕ ಹರಾಜು ನಡೆಯುವ ಮೊದಲು ಸಂಭಾವ್ಯ ಬಿಡ್‌ದಾರರನ್ನು ಭೇಟಿ ಮಾಡಲು ಆಕೆ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಹಾಜರಾಗಿದ್ದಳು. ಹರಾಜಿನ ನಂತರ ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪಕ್ಕೂ ಭೇಟಿ ನೀಡಿದ್ದಳು. ಅಲ್ಲಿ ಆ ಶ್ರೀಮಂತ ನಟನೊಂದಿಗೆ ರಾತ್ರಿ ಕಳೆದಳು. ನಂತರ ಇದೀಗ ಲಾರಾ ಶುಗರ್ ಬೇಬಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದಾಳೆ. ತನ್ನ ಕಂಪನಿಗಾಗಿ ತಿಂಗಳಿಗೆ 30,000 ಡಾಲರ್ ಪಾವತಿಸಲು ಸಿದ್ಧರಿರುವ ಶ್ರೀಮಂತ ದಾನಿ, ಲೈಂಗಿಕ ಆಸಕ್ತರನ್ನು ಹುಡುಕುತ್ತಿದ್ದಾಳೆ!
mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು ತಡೆಯಲು ಹೀಗೆ ಮಾಡಿ…