newsics.com
Solar-lunar eclipse this month ಯುಗಾದಿಗೆ ಚಂದ್ರ, ರಾಹು, ಶನಿ ಸೇರಿ ಅಪರೂಪದ ಯೋಗವನ್ನು ಉಂಟುಮಾಡುತ್ತಿದ್ದಾರೆ. ಹಾಗೆಯೇ ರಾಹು-ಶನಿಯ ಯತಿಯು ಇದ್ದು, ರವಿ-ಚಂದ್ರ-ಶುಕ್ರ-ಬುಧ ಸೇರಿದಾಗ ಅಶುಭ ಫಲಗಳು ಉಂಟಾಗುತ್ತವೆ.
14 ಮಾರ್ಚ್ ಮತ್ತು 29 ಮಾರ್ಚ್ ಚಂದ್ರ ಮತ್ತು ಸೂರ್ಯ ಗ್ರಹಣವಿದೆ. ಆದರೆ ಇದು ಭಾರತ ಮತ್ತು ಪೂರ್ವ ದೇಶಗಳಿಗೆ ಗೋಚರವಿರಲ್ಲ.
ಜನರು ಮಾರ್ಚ್ನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜಗಳ ಕದನಗಳು ಆಗಬಹುದು. ಮಾನಸಿಕ ಅಸ್ಥರತೆ ಹೆಚ್ಚಾಗಲಿದೆ. ರುದ್ರಾಭಿಷೇಕ, ಶಿವನಾಮ-ಹರಿನಾಮ ಸ್ಮರಣೆ, ಗ್ರಹಶಾಂತಿ, ದೇವಿ ಆರಾಧನೆಯಲ್ಲಿ ಹೆಚ್ಚು ತೊಡಗಬೇಕು.
ಮೇಷ ರಾಶಿಗೆ ಧನಾದಾಯ ಉತ್ತಮವಿದ್ದು, ವ್ಯಾಪಾರ ವ್ಯವಹಾರಗಳು ಹೊಸ ಚೈತನ್ಯವನ್ನು ಪಡೆಯುತ್ತವೆ. ಜನ್ಮ ಶನಿಯ ಪ್ರಭಾವ ಆರಂಭವಾಗುತ್ತದೆ. ರಾಹುವಿನ ಪ್ರಭಾವವನ್ನು ಕಾಣುವಿರಿ. ಶ್ರೀ ನರಸಿಂಹನ ಸೇವೆ ಮಾಡುತ್ತೀರಿ.
ವೃಷಭ ರಾಶಿಗೆ ಜನ್ಮ ಗುರು ವಿಶೇಷ ಸ್ಥಾನಮಾನಕ್ಕೆ ಕಾರಣನಾಗುತ್ತಾನೆ. ಶನಿಯಿಂದ ಲಾಭ ಫಲವಿದೆ. ಸ್ತ್ರೀಯರಿಂದ ಜಾಗ್ರತೆ. ಶ್ರೀ ದುರ್ಗಾರಾಧನೆ ನಡೆಯುತ್ತಿರಲಿ.
ಮಿಥುನ ರಾಶಿಗೆ ಜನ್ಮ ಕುಜ, ವ್ಯಯದ ಗುರು ವ್ಯವಹಾರ, ನೆಮ್ಮದಿ ಕೊಡುವುದಿಲ್ಲ. ತಾಳ್ಮೆಯಿಂದ ನಡೆಯಿರಿ. ಮಾತು, ಖರ್ಚುಗಳ ಬಗ್ಗೆ ಜಾಗ್ರತೆಯಿರಲಿ. ಶ್ರೀ ದುರ್ಗಾ ಸುಬ್ರಹ್ಮಣ್ಯ ದೇವರ ಮೊರೆ ಹೋಗಿ.
ಕರ್ಕಾಟಕ ರಾಶಿಗೆ ಅನೇಕ ಅವಕಾಶವಿದೆ. ಹುರುಪು ಪಡೆಯುವಿರಿ. ಅಷ್ಟಮ ಶನಿ ಪರಿಹಾರ, ಆದಾಯ ಉತ್ತಮ, ಶ್ರೀ ಸುಬ್ರಮಣ್ಯ ನಾಗರ ಸೇವೆಗಳಾಗಲಿ.
ಸಿಂಹ ರಾಶಿಗೆ ರವಿ ಗುರು ದೆಸೆಯಿಂದ ಉದ್ಯೋಗ ಭಡ್ತಿ, ಅಷ್ಟಮ ಶನಿ ಆರಂಭ, ಆರೋಗ್ಯದ ಬಗ್ಗೆ ಗಮನವಿರಲಿ, ಸಂಚಾರದಲ್ಲಿ ಜಾಗ್ರತೆ. ಗ್ರಹಗಳ ಶಾಂತಿ ಆಗಲಿ.
ಕನ್ಯಾ ರಾಶಿಗೆ ರವಿಯಿಂದ ಅನೂಕೂಲಕರ ತಿಂಗಳು. ವ್ಯಾವಹಾರಿಕವಾಗಿ ಉತ್ತಮ ತಿಂಗಳು. ವಿದ್ಯಾರ್ಥಿ ವೈದ್ಯಕೀಯ ವರ್ಗಗಳಿಗೆ ಏಳಿಗೆ. ಶ್ರೀ ಗಣಪತಿ, ನಾಗರ ಪೂಜೆಗಳಾಗಲಿ.
ತುಲಾ ರಾಶಿಗೆ ಪಂಚಮ ಶನಿ ಪರಿಹಾರ, ಏಳಿಗೆ ಕಾಣುವಿರಿ, ಕೇತುವಿನಿಂದ ಫಲ ಸಿಗುತ್ತದೆ. ಶ್ರೀ ದುರ್ಗೆ, ನಾಗರ ಪೂಜೆಗಳಾಗಲಿ.
ವೃಶ್ಚಿಕ ರಾಶಿಗೆ ದೈವಾನುಕೂಲವಿದ್ದು, ಅಧಿಕಾರ ವರ್ಗಕ್ಕೆ ಶ್ರಮ ಹೆಚ್ಚುವುದು. ಪಂಚಮ ಶನಿ ಆರಂಭವು ಆಯಾಸ ತಂದೀತು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಶ್ರೀ ದುರ್ಗಾ, ನರಸಿಂಹ ಆರಾಧನೆಗಳಾಗಲಿ.
ಧನುಸ್ಸು ರಾಶಿಗೆ ಬಹುಗ್ರಹ ಯೋಗದಿಂದ ಮಾನಸಿಕ ವಿಚಲತೆಯಾದೀತು. ಜಾಗ್ರತೆ ಇರಲಿ. ಗ್ರಹ ಶಾಂತಿ, ಧ್ಯಾನಗಳಾಗಲಿ.
ಕುಂಭ ರಾಶಿಗೆ ಶನಿಯ ಜನ್ಮ ಬಾಧೆ ಮುಗಿದಿದೆ. ರವಿ ಗುರು ಶುಕ್ರರ ಅನುಕೂಲದಿಂದ ಆದಾಯ ಅಧಿಕಾರ ಬದಲಾವಣೆ ಉತ್ತಮವಾಗಿರುತ್ತದೆ. ಶ್ರೀನಿವಾಸನ ದರ್ಶನ ಸೇವೆ ಇರಲಿ.
ಮೀನ ರಾಶಿಗೆ ಮಾನಸಿಕ ಗೊಂದಲಗಳು ಹೆಚ್ಚುವುದು. ಸ್ತ್ರೀಯರಿಗೆ ಬಾಧೆ. ಜನ್ಮ ಶನಿ ಪ್ರಭಾವವಿದೆ. ಗ್ರಹ ಶಾಂತಿ ಮಾಡಿಸಿ.