newsics.com
ಮಹಾಕುಂಭಮೇಳದಲ್ಲಿ ಮಿಂಚಿರುವ ಮೊನಾಲಿಸಾ ಈಗ ವಿವಿಧ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದು. ಲಕ್ಷ.. ಲಕ್ಷ ರೂಪಾಯಿ ಎಣಿಸುತ್ತಿದ್ದಾರೆ. ಆದರೆ, ಅವರ ಮೊದಲ ಸಿನಿಮಾಗೆ ಭಾರೀ ಸಂಕಷ್ಟ ಎದುರಾಗಿದ್ದು. ಈ ಸಿನಿಮಾ ನಿರ್ಮಾಣ ಆಗಲಿದೆಯೇ ಇಲ್ಲವೇ ಎನ್ನುವ ಅನುಮಾನ ಶುರುವಾಗಿದೆ.
ಇನ್ನೇನು ಅವರು ಸಿನಿಮಾದ ಮೂಲಕ ಹೊಸ ಜೀವನ ಪ್ರಾರಂಭಿಸಲಿದ್ದಾರೆ. ಬಾಲಿವುಡ್‌ನಲ್ಲೂ ಹೊಸ ದಾಖಲೆ ಸೃಷ್ಟಿ ಮಾಡಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಸಿನಿಮಾ ಪ್ರಾರಂಭ ಮಾಡುವುದಕ್ಕೆ ಕೆಲವರು ಬಿಡುತ್ತಿಲ್ಲ ಅಂತ ಈ ಸಿನಿಮಾದ ನಿರ್ದೇಶಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಸಿನಿಮಾಗೆ ತೊಂದರೆ ಕೊಟ್ಟವರು ಹಾಗೂ ತಡೆಯೊಡ್ಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ದಿ ಡೈರಿ ಆಫ್ ಮಣಿಪುರ್: ಇನ್ನು ಮೊನಾಲಿಸಾ ಅವರು ನಟಿಯಾಗಿ ಚೊಚ್ಚಲ ಚಿತ್ರ ದಿ ಡೈರಿ ಆಫ್ ಮಣಿಪುರ್ ಸಿನಿಮಾ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಸನೋಜ್ ಮಿಶ್ರಾ ಅವರು ನಿರ್ದೇಶಿಸುತ್ತಿದ್ದಾರೆ. ಆದರೆ ಕೆಲವು ಯೂಟ್ಯೂಬರ್‌ಗಳು ಈ ಸಿನಿಮಾದ ಬಗ್ಗೆ ಫೇಕ್ ವಿಡಿಯೋ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಿರ್ದೇಶಕ ಇಲ್ಲಿಯವರೆಗೆ ಮಾಡಿರುವ ಯಾವುದೇ ಸಿನಿಮಾ ಸಕ್ಸಸ್ ಇರಲಿ ಬಿಡುಗಡೆ ಸಹ ಆಗಿಲ್ಲ ಎಂದು ಕೆಲವರು ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ.
ಇದೀಗ ಈ ರೀತಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ನಿರ್ದೇಶಕ ಮಿಶ್ರಾ ಅವರು ದೂರು ನೀಡಿದ್ದು 5 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರು ಮೊನಾಲಿಸಾ ನಟಿಸಲಿರುವ ಸಿನಿಮಾವನ್ನು ನಿಲ್ಲಿಸುವುದಕ್ಕೆ ನೋಡುತ್ತಿದ್ದಾರೆ ಅಂತ ನಿರ್ದೇಶಕರು ದೂರಿದ್ದಾರೆ.