newsics.com
ಇವರು ಖಡಕ್ ಲೇಡಿ ಡಿಎಸ್ಪಿ ಮಾತ್ರವಲ್ಲ ಫಿಟ್ನೆಸ್ ರಾಣಿಯೂ ಹೌದು, ಇವರು ಬಾಲಿವುಡ್ ಬೆಡಗಿಯರನ್ನೇ ಮೀರಿಸುವ ಸುಂದರ ಅಧಿಕಾರಿ.
ಹೆಸರು ಪ್ರಿಯಾಂಕಾ ಬಾಜ್‌ಪೈ ,ಈಕೆ ಲೇಡಿ ಡಿಎಸ್ಪಿ. ಯುಪಿಪಿಸಿಎಸ್ ಪರೀಕ್ಷೆಯಲ್ಲಿ 6 ನೇ ರ್ಯಾಂಕ್ ಪಡೆದಿರುವ ಇವರು ತನ್ನ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಸಖತ್ ಫೇಮಸ್ ಆದವರು. ಇವರ ಪ್ರಯಾಣ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.
ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಪಿಸಿಎಸ್ ಯ 2017 ರ ಬ್ಯಾಚ್‌ನ ಟಾಪರ್‌ಗಳಲ್ಲಿ ಒಬ್ಬರಾದ ಡಿಎಸ್‌ಪಿ ಪ್ರಿಯಾಂಕಾ ಬಾಜ್‌ಪೈ, ಅಸಾಧಾರಣ ಶೈಕ್ಷಣಿಕ ಸಾಧನೆಗಳೊಂದಿಗೆ ತಮ್ಮ ಸೌಂದರ್ಯದ ಕಾರಣದಿಂದಲೂ ಹೆಸರುವಾಸಿಯಾಗಿದ್ದಾರೆ. ಲಕ್ನೋ ವಿಶ್ವ ವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಇವರು ಚಿನ್ನದ ಪದಕವನ್ನು ಕೂಡಾ ಪಡೆದಿದ್ದಾರೆ.
https://www.instagram.com/p/DFYB1ILSPG0/?igsh=MW1tajhyY3V4bWs4
ಡಿಎಸ್ಪಿ ಪ್ರಿಯಾಂಕಾ ಬಾಜ್ಪೈ ಅವರು ಯುಪಿ ಪಿಸಿಎಸ್ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದವರು. ಇದೀಗ ಇವರು ತಮ್ಮ ಬುದ್ಧಿವಂತಿಕೆ, ಸೌಂದರ್ಯದ ಜೊತೆಗೆ ಫಿಟ್ನೆಸ್ ರಾಣಿಯಾಗಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಕನ್ನೌಜ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.