newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ 17 ಆರೋಪಿಗಳು ಮಂಗಳವಾರ (ಫೆಬ್ರವರಿ 25) ಸೆಷನ್ಸ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.
ಪ್ರಕರಣದ ಎ1 ಪವಿತ್ರಾ ಗೌಡ ಹಾಗೂ ಎ2 ದರ್ಶನ್ ಕೂಡ ಕೋರ್ಟ್‌ಗೆ ಬಂದಿದ್ದರು. ವಿಚಾರಣೆ ನಡೆಸಿದ ಬಳಿಕ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಕೋರ್ಟ್ ಮುಂದೂಡಿದೆ.
ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಮುಖ್ಯವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಲೇಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಹಾಗಾಗಿ ಎಲ್ಲಾ 17 ಆರೋಪಿಗಳು ಕೋರ್ಟ್‌ಗೆ ಆಗಮಿಸಿದ್ದರು. ಎಲ್ಲರ ಹಾಜರಾತಿಯನ್ನು ಕೋರ್ಟ್ ಸಿಬ್ಬಂದಿ ದಾಖಲಿಸಿಕೊಂಡರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ದೂರವೇ ನಿಂತಿದ್ದರು. ಪರಸ್ಪರ ಮಾತನಾಡಲೂ ಇಲ್ಲ. ಅಂತರ ಕಾಯ್ದುಕೊಂಡಿದ್ದರು ಎಂದು ವರದಿಯಾಗಿದೆ.
ನಾಲ್ಕು ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸುನಿಲ್ ಆರೋಪಿಸಿದ್ದಾರೆ. ಇತರೆ ಆರೋಪಿಗಳಿಗೂ ಅಪ್ರೂವ್ ಆಗುವಂತೆ ಪೊಲೀಸರು ಹೇಳುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಡ್ಜ್ ಜೈಶಂಕರ್ ‘ನೀವು ಈ ಬಗ್ಗೆ ಅರ್ಜಿ ಹಾಕಿದರೆ ವಿಚಾರಣೆ ನಡೆಸಬಹುದು’ ಎಂದಿದ್ದಾರೆ. ಅರ್ಜಿ ಹಾಕಲು ಕೋರ್ಟ್ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.
ವಿಚಾರಣೆ ಮುಗಿಸಿ ಪವಿತ್ರಾ ಗೌಡ ಕಣ್ಣೀರು ಹಾಕುತ್ತಾ ಕೋರ್ಟ್‌ನಿಂದ ಹೊರಬಂದಿದ್ದಾರೆ. ಬಳಿಕ ಕೋರ್ಟ್‌ನಿಂದ ನೇರವಾಗಿ ಆರ್‌ಆರ್ ನಗರದ ಮನೆಯತ್ತ ಪವಿತ್ರಾ ಗೌಡ ಹೊರಟಿದ್ದಾರೆ. ಜನವರಿ 10ರಂದು ನಡೆದಿದ್ದ ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್- ಪವಿತ್ರಾ ಮುಖಾಮುಖಿ ಆಗಿದ್ದರು. ಈ ವೇಳೆ ಇಬ್ಬರೂ ಮಾತನಾಡಿದ್ದರು. ಆದರೆ ಈ ಬಾರಿ ಮಾತನಾಡಿಲ್ಲ.
ಆರ್‌ಆರ್ ನಗರದ ಮನೆಯಿಂದ ದರ್ಶನ್ ಕೋರ್ಟ್‌ಗೆ ಹೊರಟಾಗ ಕೆಲ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ದರ್ಶನ್ ಕೈ ಕುಲುಕಿ ಅಭಿಮಾನಿಗಳು ವಿಶ್ ಮಾಡಿದ್ದರು. ಕೆಲವರು ನೆಚ್ಚಿನ ನಟನ ಕಾಲಿಗೆ ಎರಗಿದ್ದರು. ಆ ಬಳಿಕ ಕಾರ್ ಏರಿ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಆಗಮಿಸಿದ್ದರು.
Company pressures employees, ಮದುವೆಯಾಗಿ ಮಕ್ಕಳನ್ನು ಪಡೆಯದಿದ್ರೆ ಕೆಲಸದಿಂದ ವಜಾ : ಉದ್ಯೋಗಿಗಳಿಗೆ ಕಂಪನಿ ಒತ್ತಡ