newsics.com
ಕೊಪ್ಪಳ: ರೀಲ್ಸ್ಗಾಗಿ ಇಲ್ಲಿನ ತುಂಗಭದ್ರಾ ನದಿಗೆ 20 ಅಡಿ ಎತ್ತರದಿಂದ ಜಿಗಿದ 26 ವರ್ಷದ ವೈದ್ಯೆಯೊಬ್ಬರು ಈಜಲು ಸಾಧ್ಯವಾಗದೆ ನೀರುಪಾಲಾದ ಘಟನೆ ನಡೆದಿದೆ.
ಸ್ನೇಹಿತರ ಜತೆ ಈಜಲು ಹೋಗಿದ್ದ ವೈದ್ಯೆ ಹೈದರಾಬಾದ್ ಮೂಲದ ಅನನ್ಯಾ ರಾವ್ 20 ಅಡಿ ಎತ್ತರದಿಂದ ತುಂಗಭದ್ರಾ ನದಿಗೆ ಜಿಗಿದಿದ್ದಾರೆ. ಆದರೆ ಈಜಲು ಸಾಧ್ಯವಾಗದೆ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯಾ ರಾವ್, ಮಂಗಳವಾರ ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ಬುಧವಾರ ಬೆಳಗ್ಗೆ ನದಿಗೆ ಈಜಲು ತೆರಳಿದ್ದರು.
ರೀಲ್ಸ್ಗಾಗಿ ವಿಡಿಯೋ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ದೂರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಒಂದು, ಎರಡು, ಮೂರು ಜಂಪ್ ಎಂದು ಹೇಳಿದ ತಕ್ಷಣ ಅನನ್ಯಾ ರಾವ್ ನದಿಗೆ ಜಿಗಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
Priya savadi ಹಾವು ಆಡಿಸಿದ ಪ್ರಿಯಾ ಸವದಿ! ಅದೆಷ್ಟು ಧೈರ್ಯ ಈಕೆಗೆ? ವಿಡಿಯೋ ನೋಡಿ
Super idea ಪರೀಕ್ಷೆ ಇದೆ ಅನ್ನೋದನ್ನೇ ಮರೆತ ಯುವಕ! ಲೇಟಾಗಿದ್ದಕ್ಕೆ ಮಾಡಿದ್ದೇನು? ವಿಡಿಯೋ ನೋಡಿ