newsics.com
‘ಕೌನ್ ಬನೇಗ ಕರೋಡ್‌ಪತಿ ಶೋನಲ್ಲಿ ಅಮಿತಾಬ್ ಬಚಾನ್ ಆಗಾಗ ಜೋಕ್, ಫನ್ ಮಾಡುತ್ತಿರುತ್ತಾರೆ. ಸ್ಫರ್ಧಿಗಳ ಜೊತೆಗೆ ಬಹಳ ಸ್ನೇಹದಿಂದ ವ್ಯವಹರಿಸುತ್ತಾರೆ. ಅಂಥದ್ದೇ ಆಪ್ತತೆಯಲ್ಲಿ ಅಮಿತಾಬ್ ಕನ್ನಡ ಹಾಗೂ ತುಳು ಮಾತನಾಡುವ ಕುಟುಂಬದ ಜತೆ ಮಾತನಾಡಿದ್ದಾರೆ. ಪ್ರತಿ ಎಂಬ ಹುಡುಗಿ ಜೂನಿಯರ್ ವಿಭಾಗದಲ್ಲಿ ಈ ಶೋನಲ್ಲಿ ಸ್ಫರ್ಧೆ ಮಾಡಿದ್ದಳು.
ಅಂದಹಾಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಸೊಸೆಯೂ ಕೂಡ ಮಂಗಳೂರು ಮೂಲದವರು. ಈ ಎಲ್ಲ ಪ್ರೊಸೆಸ್ ನಡುವೆಯೇ ಕೌನ್ ಬನೇಗ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಮುಂದೆ ಕೂತ ಕನ್ನಡಿಗ ಹುಡುಗಿಯ ಮಾತು ಬಹಳ ವೈರಲ್ ಆಗ್ತಿದೆ.
ಈ ವಿಡಿಯೋದಲ್ಲಿ ಬಿಗ್ ಬಿ ಪ್ರಶ್ನೆಗಳನ್ನು ಎದುರಿಸಲು ಹಾಟ್ ಸೀಟಲ್ಲಿ ಕೂತ ಮಗಳು ಪ್ರತಿಗೆ ಅವಳ ತಂದೆ, ‘ಆಲ್ ದಿ ಬೆಸ್ಟ್ ಕುದುರೆ’ ಅಂತ ವಿಶ್ ಮಾಡ್ತಾರೆ. ಆಗ ಅಮಿತಾಬ್ ಅವರ ಮಾತು ಅರ್ಥ ಆಗದೆ ತಲೆ ಕೆಡಿಸಿಕೊಳ್ತಾರೆ. ಆಗ ಕುದುರೆ ಎಂಬುದು ಕನ್ನಡ ಪದ. ಇಂಗ್ಲೀಶ್‌ನ ಹಾರ್ಸ್ ಇದು ಅಂತ ಆ ಹುಡುಗಿ ಹೇಳ್ತಾಳೆ. ಅದೇ ಥರ ತನ್ನನ್ನು ಅಪ್ಪ ಕುಶಾಲಿನಲ್ಲಿ ಕತ್ತೆ ಅಂತಲೂ ಕರೀತಾರೆ ಅಂತಲೂ ಹೇಳ್ತಾಳೆ. ಎರಡು ಕನ್ನಡ ಪದ ಕೇಳಿದ ಅಮಿತಾಬ್, ಇದು ತುಳುವಿನಲ್ಲೂ ಬಳಕೆಯಲ್ಲಿದೆ ಅಲ್ವಾ ಅಂತಾರೆ. ಹೌದು ಅನ್ನೋ ಮಾತು ಬರುತ್ತೆ. ಆಗ ನನ್ನ ಸೊಸೆ ತುಳು ನಾಡಿನವಳು ಅನ್ನುವ ಬಿಗ್‌ಬಿ, ತಮಾಷೆಯಾಗಿ ಅವಳನ್ನು ಈ ಹೆಸರಿನಿಂದ ಅಂತೂ ನಾನು ಕರೆಯೋದಕ್ಕೆ ಆಗಲ್ಲ ಅಂತ ನಗೆಯಾಡ್ತಾರೆ. ಅವರ ಈ ಮಾತು ಸಖತ್ ವೈರಲ್ ಆಗಿದೆ.
https://www.instagram.com/reel/DGDXRcastho/?igsh=MW81ajkwZTZhNWo5bg==