newsics.com
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿತ್ತು. ಆ ಸಂದರ್ಭದಲ್ಲಿ ಮೋದಿ ವರ್ಚಸ್ಸಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ದೇಶದಲ್ಲಿ ಮೋದಿ ಹವಾ ಪತನದ ಹಾದಿ ಹಿಡಿದಿದೆ. ಇನ್ನು ಮುಂದೆ ಮ್ಡಾಜಿಕ್ ನಡೆಯಲ್ಲ ಎಂದು ವಿಪಕ್ಷ ನಾಯಕರು ಭವಿಷ್ಯ ನುಡಿದಿದ್ದರು. ಬಿಜೆಪಿಯ ಕೆಲವು ಭಿನ್ನ ನಾಯಕರು ಇದಕ್ಕೆ ಧ್ವನಿಗೂಡಿಸಿದ್ದರು. ಆ ಬಳಿಕ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶ ಟೀಕಾಕಾರರ ಬಾಯಿ ಮುಚ್ಚಿಸಿತ್ತು.
ಆದರೆ ಸಂಪೂರ್ಣವಾಗಿ ಮೋದಿ ಕುರಿತ ಚರ್ಚೆ ಅಂತ್ಯವಾಗಿರಲಿಲ್ಲ. ಇದೀಗ ದೆಹಲಿ ಫಲಿತಾಂಶ ಪ್ರಕಟವಾಗಿದೆ. ದೆಹಲಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದಕ್ಕೆ ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಕಾರಣಗಳ ಪಟ್ಟಿ
ಅವಲೋಕಿಸಿದಾಗ ಇದರ ಹಿಂದೆ ಮೋದಿ ಪರಿಶ್ರಮ ಸಾಕಷ್ಟು ಇರುವುದು ಸ್ಪಷ್ಟವಾಗಿದೆ.
ಫಲಿತಾಂಶದ ಗೆಲುವು- ಎಚ್ಚರಿಕೆ
ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ದೆಹಲಿ ಚುನಾವಣೆಯ ಗೆಲುವನ್ನು ಸಂಭ್ರಮಿಸಿದೆ. ಇದರಲ್ಲಿ ತಪ್ಪಿಲ್ಲ, ಇದರ ಜತೆ ಜತೆಗೆ ಸಾಮೂಹಿಕ ನಾಯಕತ್ವದ ಪ್ರಶ್ನೆಗಳು ಎದ್ದಿವೆ.
ಸದ್ಯದ ಸ್ಛಿತಿಯಲ್ಲಿ ಬಿಜೆಪಿಯಲ್ಲಿ
ಮೋದಿ ಸರಿಗಟ್ಟುವ ಇತರ ನಾಯಕರು ಇಲ್ಲ. ಈ ಮಾತನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಮುಂದೆ ಏನು ಎಂಬ ಪ್ರಶ್ನೆ ಕೇಳಿದಾಗ ಅಲ್ಲಿ ಮೌನವೇ ಉತ್ತರವಾಗುತ್ತದೆ. ಮೋದಿ ಚುನಾವಣೆಯಲ್ಲಿ
ಬಿಜೆಪಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ಕುರಿತು ಅವರ ಬದ್ಧತೆ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ.
ರಾಜಕಾರಣದಲ್ಲಿ ಸಕ್ರಿಯವಾಗಿರಲು ಆರೋಗ್ಯ ಅತೀ ಮುಖ್ಯ. ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಯ ಆರೋಗ್ಯ ಸ್ಥಿತಿ ಅತ್ಯಂತ ಪ್ರಮುಖ ಮಾನದಂಡವಾಗಿರುತ್ತದೆ
ಬಿಜೆಪಿಗೆ ಕಾಲ ಕಾಲಕ್ಕೆ ಆರ್‌ಎಸ್‌ಎಸ್ ತನ್ನ ನಾಯಕರನ್ನು ಎರವಲು ಸೇವೆ ರೂಪದಲ್ಲಿ ಕೊಡುತ್ತದೆ. ಈ ಸಂಪ್ರದಾಯ ಈಗಲೂ ಮುಂದುವರಿದಿದೆ. ಬಿಜೆಪಿ ಮೋದಿ ನಾಯಕತ್ವ ಸಕ್ರಿಯವಾಗಿರುವಾಗಲೇ
2ನೇ ಹಂತದ ಸಮರ್ಥ ನಾಯಕರನ್ನು ಸಿದ್ಧಪಡಿಸಬೇಕಾಗಿದೆ. ಇದು ಇಂದಿನ ತುರ್ತು ಅಗತ್ಯ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ರೀತಿಯ ವ್ಯವಸ್ಥೆ ಆದರೆ ಪಕ್ಷದ ಚಲನಶೀಲತೆಗೆ ಇದು ಸಹಕಾರಿ ಆಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದು ಬಿಜೆಪಿ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ ತಂದೊಡ್ಡಲಿದೆ.
ಬದಲಾವಣೆ ಗಾಳಿ ಬಿಜೆಪಿಯಲ್ಲಿ ಹೊಸತನಕ್ಕೆ ದಾರಿ ಮಾಡಿಕೊಡಬೇಕು ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ. ಅಸ್ಸಾಂ ಮುಖ್ಯಮಂತ್ರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಜತೆಗೆ ಯುಪಿ ಮುಖ್ಯಮಂತ್ರಿ ತಮ್ಮದೇ ಆದ ಕಾರಣಗಳಿಂದ ಬಿಜೆಪಿಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿರುವ ಅಮಿತ್ ಶಾ, ರಾಜನಾಥ್ ಸಿಂಗ್,
ಬಿಜೆಪಿಯ ಪ್ರಮುಖ ನಾಯಕರಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ನಾಯಕರಿಗೆ ಪಕ್ಷ ಯಾವ ಜವಾಬ್ದಾರಿ ನೀಡಲಿದೆ ಎಂಬುದು ಕುತೂಹಲದ ವಿಷಯವಾಗಿದೆ.
ದೆಹಲಿ ಚುನಾವಣೆ ಜಯದ ಸಂಭ್ರಮದಲ್ಲಿರುವ ಬಿಜೆಪಿ ಭವಿಷ್ಯದ ರಾಜಕೀಯ ಕದನಕ್ಕೆ ಸಜ್ಜಾಗಬೇಕಾದ ಅನಿರ್ವಾಯತೆಯಲ್ಲಿದೆ.
Supreme Court judgment ಕೆಲಸದ ಸ್ಥಳದಲ್ಲಿ ಹಿರಿಯರು ಎಚ್ಚರಿಕೆ ನೀಡುವುದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂ ತೀರ್ಪು
new fastag rules ಇಂದಿನಿಂದ ಹೊಸ FASTag ನಿಯಮ ಜಾರಿ, ಈ ಬಗ್ಗೆ ತಿಳಿದುಕೊಳ್ಳದಿದ್ದರೆ ಅಪಾಯ ನಿಶ್ಚಿತ