Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > unemployed tekki cry ದಯವಿಟ್ಟು ನನಗೊಂದು ಕೆಲಸ ಕೊಡಿ, ಸಂಬಳ ಬೇಡ: ನಿರುದ್ಯೋಗಿ ಟೆಕ್ಕಿಯ ಅಳಲು
Uncategorized

unemployed tekki cry ದಯವಿಟ್ಟು ನನಗೊಂದು ಕೆಲಸ ಕೊಡಿ, ಸಂಬಳ ಬೇಡ: ನಿರುದ್ಯೋಗಿ ಟೆಕ್ಕಿಯ ಅಳಲು

Share
2 Min Read
SHARE

newsics.com

ಬೆಂಗಳೂರು: ದಯವಿಟ್ಟು ತನಗೊಂದು ಕೆಲಸ ಕೊಡಿ ಎಂದು ಟೆಕ್ಕಿ ರೆಡ್ಡಿಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕಳೆದ 2 ವರ್ಷಗಳಿಂದ ಸರಿಯಾಗಿ ಕೆಲಸ ಸಿಕ್ಕಿಲ್ಲ. ಸಿಕ್ಕರೂ ಒಪ್ಪಂದ, ಕೆಲ ತಿಂಗಳಿಗೆ ಮಾತ್ರ. ಇದೀಗ ಫುಲ್ ಟೈಮ್ ಕೆಲಸ ಬೇಕು. ಸಂಬಳ ಕೊಡದಿದ್ದರೂ ಪರ್ವಾಗಿಲ್ಲ, ಉಚಿತವಾಗಿ ಕೆಲಸ ಮಾಡುತ್ತೇನೆ ಎಂದು ಟೆಕ್ಕಿ ಮಾಡಿದ ಮನವಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ, ಆತಂಕವನ್ನೂ ಹೊರಹಾಕಿದೆ.

ಬೆಂಗಳೂರಿನ ಟೆಕ್ಕಿ 2003ರಲ್ಲಿ ಎಂಜಿನಿಯರಿಂಗ್ ಮುಗಿಸಿ ಒಪ್ಪಂದದ ಮೇರೆಗೆ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದಾನೆ. ಆದರೆ ಎಲ್ಲೂ ಫುಲ್ ಟೈಮ್ ಕೆಲಸ ಸಿಗಲಿಲ್ಲ. ಅದೆಷ್ಟೇ ಪ್ರಯತ್ನಪಟ್ಟರೂ ಟೆಕ್ಕಿಗೆ ಕೆಲಸ ಸಿಗಲಿಲ್ಲ.

ಕಳೆದ 2 ವರ್ಷದಿಂದ ಈತ ಕೆಲಸಕ್ಕಾಗಿ ಅಲೆದಾಡಿ, ರೆಸ್ಯೂಮ್ ನೀಡಿ ಸುಸ್ತಾಗಿದ್ದಾನೆ. ಬಹುತೇಕ ಕಂಪನಿ ಮೆಟ್ಟಿಲು ಹತ್ತಿ ಇಳಿದಿದ್ದಾನೆ. ಇಮೇಲ್ ಮೂಲಕ ರೆಸ್ಯೂಮ್ ಫಾರ್ವರ್ಡ್ ಮಾಡಿದ್ದಾನೆ. ಆದರೆ ಯಾವುದೂ ಕೈಗೂಡಲಿಲ್ಲ.

ಇದೀಗ ರೆಡ್ಡಿಟ್ ಮೂಲಕ ತನ್ನ ರೆಸ್ಯೂಮ್, ಬಯೋಡೇಟಾ ಹಂಚಿಕೊಂಡು ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ನಾನು 2023ರಲ್ಲಿ ಬಿಇ ಇನ್‌ಫಾರ್ಮೇಶನ್ ಸೈನ್ಸ್ ಹಾಗೂ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಆದರೆ ಸದ್ಯ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದೇನೆ. ಜಾವಾ, ಪೈಥಾನ್, ಡೆವ್ ಆಪ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಶಿನ್ ಲರ್ನಿಂಗ್ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದೇನೆ. CI/CD ಪೈಪ್‌ಲೈನ್, ಡಾಕರ್, ಕುಬರೆನೆಟೆಸ್, ಎಪಿಐ ಡೆವಲಪ್‌ಮೆಂಟ್ ಸೇರಿ ಕೆಲ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂದು ಈತ ತನ್ನ ರೆಸ್ಯೂಮ್‌ನಲ್ಲಿ ಹೇಳಿಕೊಂಡಿದ್ದಾನೆ.

ಪದವಿ ಮುಗಿಸಿದ ಬಳಿಕ ಸರಿಯಾಗಿ ಕೆಲಸ ಸಿಕ್ಕಿಲ್ಲ. ಇಂಟರ್ನಿಯಾಗಿ ಎರಡು ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಫುಲ್ ಟೈಮ್ ಕೆಲಸ ಮಾತ್ರ ಸಿಗುತ್ತಿಲ್ಲ. ನನಗೆ ಫುಲ್ ಟೈಮ್ ಕೆಲಸ ಬೇಕು, ನಾನು ಮನೆಯಿಂದ ಬೇಕಾದರೆ ಉಚಿತವಾಗಿ ಯಾವುದೇ ಸಂಬಳ ಇಲ್ಲದೆ ಕೆಲಸ ಮಾಡಲು ಸಿದ್ಧನಿದ್ದೇನೆ. ಕಾರಣ ನನಗೆ ಎಕ್ಸ್‌ಪೀರಿಯನ್ಸ್ ಬೇಕು.

ಹಲವು ಕಂಪನಿಯ ಸಂದರ್ಶನದಲ್ಲಿ ಅನುಭವ ಎಷ್ಟಿದೆ ಎಂದು ಕೇಳಿದಾಗ, ಫುಲ್ ಟೈಮ್ ಜಾಬ್ ಅನುಭವ ನನಗಿಲ್ಲ. ಹೀಗಾಗಿ ಕೈಗೆ ಬಂದ ಹಲವು ಕೆಲಸಗಳು ಜಾರಿ ಹೋಗಿದೆ ಎಂದು ಟೆಕ್ಕಿ ಅಳಲು ತೋಡಿಕೊಂಡಿದ್ದಾನೆ.

ನಾನೀಗ ಫುಲ್ ಟೈಮ್ ಕೆಲಸದ ಅನಿವಾರ್ಯತೆಯಲ್ಲಿದ್ದೇನೆ. ಫುಲ್ ಟೈಮ್ ಕೆಲಸ ಸೂಚಿಸಿ ಎಂದು ರೆಸ್ಯೂಮ್‌ ಕವರ್ ಲೆಟರ್‌ನಲ್ಲಿ ಬರೆದುಕೊಂಡಿದ್ದಾನೆ.

Supreme Court judgment ಕೆಲಸದ ಸ್ಥಳದಲ್ಲಿ ಹಿರಿಯರು ಎಚ್ಚರಿಕೆ ನೀಡುವುದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂ ತೀರ್ಪು

Political analysis ಮುಂದಿದೆ ಬಿಜೆಪಿಯ ನಿಜವಾದ ಅಗ್ನಿಪರೀಕ್ಷೆ

TAGGED:no salary: unemployed tekki cryPlease give me a job
Share This Article
Facebook Twitter Copy Link Print
Previous Article Political analysis ಮುಂದಿದೆ ಬಿಜೆಪಿಯ ನಿಜವಾದ ಅಗ್ನಿಪರೀಕ್ಷೆ
Next Article flying seagliders ಬರಲಿವೆ ಹಾರಬಲ್ಲ ಎಲೆಕ್ಟ್ರಿಕ್ ಸೀಗ್ಲೈಡರ್‌ಗಳು! ಕೋಲ್ಕತ್ತಾ- ಚೆನ್ನೈಗೆ ಪ್ರಯಾಣಕ್ಕೆ ಬರೀ 600 ರೂ.

Popular Posts

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

You Might Also Like

Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read
Uncategorized

Karnataka Rain: ನಾಳೆಯ ಹವಾಮಾನ: ಕರ್ನಾಟಕದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?