Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Century pair ಸುದೀರ್ಘ ದಾಂಪತ್ಯ: ದಾಖಲೆ ಬರೆದ ಶತಾಯುಷಿ ಜೋಡಿ! 13 ಮಕ್ಕಳು, ನೂರಕ್ಕೂ ಹೆಚ್ಚು ಮೊಮ್ಮಕ್ಕಳು!
ಅನಾವರಣಪ್ರಮುಖರಿಲೇಷನ್‌ಶಿಪ್ವಿದೇಶವೈರಲ್

Century pair ಸುದೀರ್ಘ ದಾಂಪತ್ಯ: ದಾಖಲೆ ಬರೆದ ಶತಾಯುಷಿ ಜೋಡಿ! 13 ಮಕ್ಕಳು, ನೂರಕ್ಕೂ ಹೆಚ್ಚು ಮೊಮ್ಮಕ್ಕಳು!

Share
2 Min Read
SHARE

newsics.com

ಶತಾಯುಷಿ ದಂಪತಿ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಈ ಜೋಡಿ 13 ಮಕ್ಕಳು, 100ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದು, ಸುದೀರ್ಘ ದಾಂಪತ್ಯ ಜೀವನ ನಡೆಸಿದ ದಾಖಲೆ ಬರೆದಿದ್ದಾರೆ.

ಬ್ರೆಜಿಲ್‌ನ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು ಮಾರಿಯಾ ಡಿ ಸೌಸಾ ಡಿನೋ ದಂಪತಿ ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಮದುವೆಯಾಗಿ 84 ವರ್ಷ 77 ದಿನಗಳನ್ನು ಕಳೆದಿರುವ ಈ ಜೋಡಿಯ ಪ್ರೇಮಕಥೆ ಆರಂಭವಾಗಿದ್ದು 1936 ರಲ್ಲಿ. ಇದಾದ ಬಳಿಕ ನಾಲ್ಕು ವರ್ಷಗಳ ನಂತರ ಅಂದರೆ 1940 ರಲ್ಲಿ, ಅವರು ಬ್ರೆಜಿಲ್‌ನ ಸಿಯೆರಾದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂದಿನಿಂದ ಇಂದಿನವರೆಗೂ ಈ ದಂಪತಿ ಒಟ್ಟಿಗೇ ಸುಂದರವಾದ ಜೀವನ ನಡೆಸಿಕೊಂಡು ಬಂದಿದ್ದಾರೆ. ಜತೆಗೆ ಈ ದಂಪತಿ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿ ಮೊಮ್ಮಕ್ಕಳು ಹೀಗೆ ಒಟ್ಟು 100ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದುವ ಮೂಲಕ ದೊಡ್ಡ ಕುಟಂಬವನ್ನೇ ಸೃಷ್ಟಿಸಿದ್ದಾರೆ.

105 ವರ್ಷ ವಯಸ್ಸಿನ ಮನೋಯೆಲ್ ಮತ್ತು 101 ವರ್ಷ ವಯಸ್ಸಿನ ಮಾರಿಯಾ ಪ್ರೀತಿಯ ಜೀವನ ಆನಂದಿಸುತ್ತಿದ್ದಾರೆ.

ವಯಸ್ಸಿನ ಕಾರಣದಿಂದಾಗಿ, ಮನೋಯೆಲ್ ದಿನದ ಹೆಚ್ಚಿನ ಸಮಯ ವಿಶ್ರಾಂತಿ ಪಡೆಯುತ್ತಾರೆ. ಆದರೆ ಪ್ರತಿದಿನ ಅವರು ಪತ್ನಿ ಮಾರಿಯಾ ಜತೆ ಸಂಜೆ 6 ಗಂಟೆಗೆ ರೇಡಿಯೊ ಕೇಳುತ್ತಾರಂತೆ. ತಮ್ಮ ಈ ಸುದೀರ್ಘ ಸುಖಿ ದಾಂಪತ್ಯ ಜೀವನದ ರಹಸ್ಯವೇ ‘ಪ್ರೀತಿ’ ಎನ್ನುತ್ತಾರೆ ಈ ವೃದ್ಧ ದಂಪತಿ.

ಶತಾಯುಷಿಗಳ ಸ್ಪೂರ್ತಿದಾಯಕ ಜೀವನದ ಕಥೆಗಳನ್ನು ಹೇಳುವ ಲಾಂಗೆವಿಕ್ವೆಸ್ಟ್ (longeviquest) ಸಂಸ್ಥೆಯು ಈ ದಂಪತಿಗಳ ಸ್ಫೂರ್ತಿದಾಯಕ ಸ್ಟೋರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಇದಕ್ಕೂ ಮೊದಲು ಕೆನಡಾದ ಡೇವಿಡ್ ಜಾಕೋಬ್ ಹಿಲ್ಲರ್ ಮತ್ತು ಸಾರಾ ಡೇವಿ ಹಿಲ್ಲರ್ ಈ ದಾಖಲೆ ನಿರ್ಮಿಸಿದ್ದರು. ಅವರು 88 ವರ್ಷ ಮತ್ತು 349 ದಿನಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಇದೀಗ ಮನೋಯೆಲ್, ಮಾರಿಯಾ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ಈ ದಾಖಲೆ ಬರೆದಿದ್ದಾರೆ.

Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ

Husband distributed ಗಂಡನನ್ನೇ ಇಬ್ಬರು‌ ಹೆಂಡತಿಯರಿಗೆ ಹಂಚಿದ ಕೌಟುಂಬಿಕ ಸಲಹಾ‌ ಕೇಂದ್ರ! ಹಂಚಿಕೆ ಹೇಗಾಯ್ತು?

TAGGED:Long Marriage: The record -written century pair!
Share This Article
Facebook Twitter Copy Link Print
Previous Article IPL 2025ರ ವೇಳಾಪಟ್ಟಿ ಪ್ರಕಟ, ಬೆಂಗಳೂರಲ್ಲಿ RCB ಪಂದ್ಯಗಳು ಯಾವಾಗ?
Next Article shamanth bro gowda engaged ಪ್ರೀತಿಸಿದ ಹುಡುಗಿ ಜತೆ ನಟ ಶಮಂತ್ ಬ್ರೋ ಗೌಡ ನಿಶ್ಚಿತಾರ್ಥ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?