newsics.com
ಬ್ರೋ ಗೌಡ ಅಲಿಯಾಸ್ ಶಮಂತ್, ವ್ಯಾಲೇಂಟೈನ್ಸ್ ಡೇಗೆ ತಮ್ಮ ವ್ಯಾಲೇಂಟೈನ್ ಯಾರು ಅಂತ ಪರಿಚಯಿಸಿದ್ದರು. ಇದೀಗ ಆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮೇಘನಾ ಜೊತೆ ಶಮಂತ್ ಗೌಡ ಅಫೀಶಿಯಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.ಕುಟುಂಬಸ್ಥರ ಸಮ್ಮುಖದಲ್ಲಿ ಹಾರ ಮತ್ತು ಉಂಗುರವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಬ್ರೋ ಗೌಡ ಮತ್ತು ಮೇಘನಾ ನಿಶ್ಚಿತಾರ್ಥ ನಡೆದಿದೆ.
ಸೀರೆಯುಟ್ಟು ಮೇಘನಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರಿಬ್ಬರು ಎಂಗೇಜ್ ಆಗಿದ್ದು, ಮದುವೆಗೆ ಸಜ್ಜಾಗಿದ್ದಾರೆ.