newsics.com
ಮೋಹಕತಾರೆ ರಮ್ಯಾ ಸಿನಿಮಾ ಕಾರ್ಯಕ್ರಮವೊಂದಕ್ಕೆ ಬಂದಿದದು, ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ, ಮದುವೆ, ಸಿನಿಮಾ ಕಮ್‌ಬ್ಯಾಕ್ ಬಗ್ಗೆ ಮಾತನಾಡುವುದರ ಜೊತೆಗೆ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಳಿಕ ಈ ಪ್ರಶ್ನೆ ಕೇಳ್ತಿದ್ದಂತೆ ನಟಿ ರಮ್ಯಾ ಗರಂ ಆಗಿದ್ದರು. ಸಿನಿಮಾಗೋಸ್ಕರ ಟ್ರೀಟ್ಮೆಂಟ್ ತಗೊಳ್ಳೋದು, ಸಣ್ಣ ಆಗುವಂಥದ್ದು ಈ ರೀತಿ ಪ್ಲಾನ್ ಇದ್ಯಾ? ಹಾಗಂತ ಸುದ್ದಿ ಓಡಾಡ್ತಾ ಇರುತ್ತಲ್ಲ’ ಎಂದು ಕೇಳಿದ ಪ್ರಶ್ನೆಗೆ ನಟಿ ಸ್ವಲ್ಪ ರಾಂಗ್ ಆಗಿದ್ದಾರೆ. ‘ಏನಕ್ಕೆ ಅವೆಲ್ಲಾ? ನಾನು ಮೊದಲಿನಿಂದಲೂ ಹೇಗೆ ಇದೀನೋ ಹಾಗೇ ಇದೀನಿ. ಸಿನಿಮಾಗೋಸ್ಕರ, ಪಾತ್ರಕ್ಕೋಸ್ಕರ ಯಾವತ್ತೂ ಬದಲಾಗಿಲ್ಲ. ನಾನು ಸಿನಿಮಾಗೆ ಬರ್ಬೇಕು ಅಂತ ಯಾವತ್ತೂ ಅಂದ್ಕೊಂಡಿರ್ಲಿಲ್ಲ. ಅದು ತಾನಾಗೇ ಆಯ್ತು ಅಷ್ಟೇ. ಎಂದು ಉತ್ತರಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ ‘ಸದ್ಯಕ್ಕೆ ಸಿನಿಮಾದಲ್ಲಿ ಮತ್ತೆ ನಟಿಸುವ ಪ್ಲಾನ್ ಏನೂ ಇಲ್ಲ. ಅಂಥ ಒಳ್ಳೆಯ ಸ್ಕ್ರಿಪ್ಟ್ ಸಿಕ್ರೆ ನಾನೇ ಸಿನಿಮಾ ನಿರ್ಮಾಣ ಮಾಡಿ ನಟಿಸ್ತೀನಿ. ಆದ್ರೆ ಸದ್ಯಕ್ಕೆ ಯಾವುದೂ ಅಂತ ಕಥೆ ಹಾಗೂ ಪಾತ್ರ ಬಂದಿಲ್ಲ’ ಎಂದು ಹೇಳಿದ್ದಾರೆ.
.ಕಳೆದ ಹತ್ತು ವರ್ಷಗಳಿಂದಲೂ ರಮ್ಯಾ ಮತ್ತೆ ನಟಿಸುತ್ತಾರೆ ಎಂಬ ಸುದ್ದಿ ಓಡಾಡುತ್ತಲೇ ಇದೆ. ಆದರೆ, ಆ ಸುದ್ದಿ ಯಾವತ್ತೂ ಸತ್ಯವಾಗಿಲ್ಲ. ಈಗಲೂ ರಮ್ಯಾ ಮಾತನ್ನು ಕೇಳಿದ್ರೆ ಸದ್ಯಕ್ಕೆ ನಟಿ ರಮ್ಯಾ ಮತ್ತೆ ಸಿನಿಮಾಗೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.