newsics.com
17 ವರ್ಷದ ಬಾಲಕಿ ಈಗ ಕೈಬರಹದಿಂದ ಸಖತ್ ಫೇಮಸ್ ಆಗಿದ್ದಾರೆ. ಈ ಮೂಲಕ ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಪಡೆದುಕೊಂಡಿದ್ದಾರೆ.
ಇವರ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರಹದಿಂದಾಗಿ ಫೇಮಸ್ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್ರೈಟರ್ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ.
ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್ ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು.
ಯುನೈಟೆಡ್ ಅರಬ್ ಎಮಿರೆಟ್ಸ್ನ 51ನೇ ಸ್ಪಿರಿಟ್ ಆಫ್ ಯುನಿಯನ್ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್ ಆಗುತ್ತಿವೆ. ಪ್ರಕೃತಿ ಅವರಿಗೆ ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ.
Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ
Gold rate hike ಆಭರಣಪ್ರಿಯರಿಗೆ ಬಿಗ್ ಶಾಕ್: ನಿನ್ನೆಯಿಂದ ಇವತ್ತಿಗೆ ಚಿನ್ನದ ದರ ಡಬಲ್ ಏರಿಕೆ