newsics.com
ನವದೆಹಲಿ: ಮಕ್ಕಳನ್ನು ಮಾಡೆಲ್ ಗಳಂತೆ ಪ್ರದರ್ಶನಕ್ಕಿಡಬೇಡಿ ಎಂದು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಪೋಷಕರು ಬೇರೆಯ ಮಕ್ಕಳನ್ನು ನೋಡಿ ತಮ್ಮ ಮಕ್ಕಳು ಹೀಗೆಯೇ ಇರಬೇಕು, ಬೇರೆಯವರ ಮನೆಯ ಮಕ್ಕಳಂತೆಯೇ ಓದಬೇಕೆಂದು ಬಯಸಬೇಡಿ. ನಿಮ್ಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳನ್ನು ಓದಲು ಅನುವು ಮಾಡಿಕೊಡಿ ಎಂದಿದ್ದಾರೆ.
ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆ ಬೇರೆ. ಪರೀಕ್ಷೆಯೇ ಬದುಕು ಅಲ್ಲ. ವಿದ್ಯಾರ್ಥಿಗಳು ತಮಗೆ ತಾವೇ ಸವಾಲು ಹಾಕಿಕೊಳ್ಳಬೇಕು, ಹಿಂದಿನ ಪರೀಕ್ಷೆಗಿಂತ ಮುಂದಿನ ಬಾರಿ ಉತ್ತಮ ಸಾಧನೆಗೆ ಪ್ರಯತ್ನಿಸಬೇಕು. ನಾಯಕನಾದವನ ಕೆಲಸ ಇನ್ನೊ ಬ್ಬರ ತಪ್ಪನ್ನು ತಿದ್ದುವುದಲ್ಲ ಎಂದರು.
ಮಕ್ಕಳು ಕೂಡ ತಮ್ಮ ಆಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದುಯ ಬೇಡ, ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ, ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಪ್ರತಿಯೊಂದು ಮಕ್ಕಳು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಉತ್ತಮವಾಗಿರುತ್ತಾರೆ ಎಂದರು.