newsics.com
ನವದೆಹಲಿ: ವಿದ್ಯಾರ್ಥಿಗಳಲ್ಲಿನ ಪರೀಕ್ಷೆಯ ಒತ್ತಡ ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಈ ಬಾರಿ ಹೊಸ ರೂಪ ಪಡೆಯಲಿದೆ.
ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದು, ಈ ಬಾರಿ ವಿವಿಧ ಕ್ಷೇತ್ರಗಳ ಏಳು ಸೆಲೆಬ್ರಿಟಿಗಳು ಪರೀಕ್ಷೆಯ ಸಮಯದಲ್ಲಾಗುವ ಒತ್ತಡವನ್ನು ನಿವಾರಿಸುವ ಕುರಿತು ಸಲಹೆ ನೀಡಲಿದ್ದಾರೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ಫೆಬ್ರವರಿ 10ರಂದು ನವದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆಯಲಿದೆ. ಈವರೆಗೆ ಪ್ರಧಾನಿಯೊಂದಿಗೆ ಮಾತ್ರ ಸಂವಾದ ನಡೆಯುತ್ತಿತ್ತು. ಆದರೆ ಈಗ ಸೆಲೆಬ್ರಿಟಿಗಳು ಕೂಡ ಇದರ ಭಾಗವಾಗಿರಲಿದ್ದಾರೆ.
ಈ ಬಾರಿ ಸದ್ಗುರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಮೇರಿ ಕೋಮ್ ಮತ್ತು ಅವನಿ ಲೇಖರಾ ಸಲಹೆಗಳನ್ನು ನೀಡಲಿದ್ದಾರೆ.

ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ವಿಶೇಷ ಸಂವಾದ, ಇದರಲ್ಲಿ ಅವರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.
ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಾರಿ 35 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುತ್ತಾರೆ. 50-60 ವಿದ್ಯಾರ್ಥಿಗಳು ಮತ್ತು ಇತರೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಸುಮಾರು ಆರುನೂರು ವಿದ್ಯಾರ್ಥಿಗಳು ಈ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚೆಗಾಗಿ ಈ ಬಾರಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ದಾಖಲೆಯ 3.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 14, 2024 ರಿಂದ ಪ್ರಾರಂಭವಾಗಿ ಜನವರಿ 14, 2025 ರವರೆಗೆ ನಡೆಯಿತು. ಒಟ್ಟು 2,500 ಆಯ್ದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?