newsics.com
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2025ರಲ್ಲಿ ಮಿತ್ರ ಪಕ್ಷ ಜೆಡಿಯು ಆಡಳಿತ ಹೊಂದಿರುವ ಬಿಹಾರ ರಾಜ್ಯಕ್ಕೆ ಮಹಾಪೂರ ಕೊಡುಗೆ ಘೋಷಿಸಲಾಗಿದೆ.

ಮಖಾನಾ ಮಂಡಳಿ, ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮತ್ತು ಮಿಥಿಲಾಂಚಲ್ ಪ್ರದೇಶದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಆರ್ಥಿಕ ನೆರವು ಸೇರಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

2025 ರ ಬಜೆಟ್ನಲ್ಲಿ ಬಿಹಾರಕ್ಕೆ ಹಲವಾರು ಯೋಜನೆಗಳ ಘೋಷಣೆಯು ಉದ್ಯಮಿಗಳು ಮತ್ತು ನಾಗರಿಕರನ್ನು ಸಂತೋಷಪಡಿಸಿದರೆ, ಸಾಮಾಜಿಕ ಮಾಧ್ಯಮಗಳು ಮೀಮ್ಗಳಿಂದ ತುಂಬಿ ಹೋಗಿವೆ. ಅಂತಹ ಕೆಲವೊಂದು ಹಾಸ್ಯದ ಮೀಮ್ಸ್ ಗಳು ಇಂತಿವೆ.