Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Tiger Urine ಹುಲಿಯ ಮೂತ್ರಕ್ಕೆ ಭಾರೀ ಡಿಮ್ಯಾಂಡ್: ಸಂಚಲನ ಮೂಡಿಸಿದ ಹೊಸ ಬ್ಯುಸಿನೆಸ್
ದೇಶಪ್ರಮುಖ

Tiger Urine ಹುಲಿಯ ಮೂತ್ರಕ್ಕೆ ಭಾರೀ ಡಿಮ್ಯಾಂಡ್: ಸಂಚಲನ ಮೂಡಿಸಿದ ಹೊಸ ಬ್ಯುಸಿನೆಸ್

Share
1 Min Read
SHARE

newsics.com

ಬೀಜಿಂಗ್‌: ಇತ್ತೀಚೆಗೆ ಹುಲಿಯ ಮೂತ್ರಕ್ಕೆ ಜಾಗತಿಕವಾಗಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಚೀನಾದವರು ತಮ್ಮ ಪ್ರಾಣಿ ಸಂಗ್ರಹಾಲಯದಲ್ಲಿರುವ ಹುಲಿಗಳಿಂದ ಮೂತ್ರ ಸಂಗ್ರಹಿಸಿ ಜಾಗತಿಕವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಹುಲಿ ಮೂತ್ರದಿಂದ ಸಂಧಿವಾತ, ಸ್ನಾಯುಸೆಳೆತ ಹಾಗೂ ಉಳುಕು ನೋವುಗಳು ಬೇಗ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ.

ಇದರಿಂದಾಗಿ ಈಗ ಹುಲಿಯ ಮೂತ್ರಕ್ಕೆ ಭಾರೀ ಬೇಡಿಕೆ ಉಂಟಾಗಿದ್ದರಿಂದ ಚೀನಾದವರು ಒಂದು ಬಾಟಲ್ ಹುಲಿ ಮೂತ್ರವನ್ನು ಸುಮಾರು 596 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಆದರೆ ಹುಲಿ ಮೂತ್ರದಿಂದ ಈ ರೀತಿಯಾದ ಸಮಸ್ಯೆಗಳು ದೂರವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಯಾವುದೇ ರೀತಿಯಲ್ಲಿ ಸಾಬೀತಾಗಿಲ್ಲ. ಹೀಗಾಗಿ ತಜ್ಞರು ಈ ಒಂದು ಹುಲಿ ಮೂತ್ರ ಮಾರುವ ರೂಢಿಯನ್ನು ವಿರೋಧಿಸುತ್ತಿದ್ದಾರೆ. ಇದು ಅನೈತಿಕ ಹಾಗೂ ತುಂಬಾ ಅಪಾಯಕಾರಿ ಎಂದು ಕೂಡ ಎಚ್ಚರಿಸಿದ್ದಾರೆ.
ಕೋವಿಡ್‌ ವೈರಸ್‌ನ ತವರು ದೇಶ ಚೀನಾ ಈಗ ಹುಲಿ ಮೂತ್ರವನ್ನು ಮಾರಾಟ ಮಾಡುವ ಮೂಲಕ ಸುದ್ದಿಯಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಹೇಳಿ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಲು ಆರಂಭಿಸಿದೆ.

ಚುವಾನ್ ಪ್ರಾಂತ್ಯದಲ್ಲಿ, ಯಾನ್ ಬೈಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯವು ಬಾಟಲ್ ಹುಲಿ ಮೂತ್ರವನ್ನು ಸಂಧಿವಾತ, ಉಳುಕು ಮತ್ತು ಸ್ನಾಯು ನೋವಿಗೆ ಪರಿಹಾರವಾಗಿ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 250 ಎಂಎಲ್‌ ಸೈಬಿರಿಯನ್‌ ಹುಲಿ ಮೂತ್ರಕ್ಕೆ 50 ಯುವಾನ್‌ (ಅಂದಾಜು 596 ರೂ.) ಬೆಲೆಯನ್ನು ನಿಗದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹುಲಿ ಮೂತ್ರಕ್ಕೆ ಬಿಳಿ ವೈನ್‌, ಶುಂಠಿ ಚೂರನ್ನು ಹಾಕಿ ಮಿಶ್ರಣ ಮಾಡಿ ನೋವು ಇರುವ ಜಾಗಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ ಎಂದು ತನ್ನ ಪ್ರಚಾರದ ಲೇಬಲ್‌ನಲ್ಲಿ ಮುದ್ರಿಸಿತ್ತು. ಅಷ್ಟೇ ಅಲ್ಲದೇ ಹುಲಿ ಮೂತ್ರವನ್ನು ಕುಡಿಯಲೂಬಹುದು ಎಂದು ಹೇಳಿತ್ತು. ಆದರೆ ಅಲರ್ಜಿಯಾದರೆ ಕುಡಿಯುವುದನ್ನು ನಿಲ್ಲಿಸುವಂತೆ ಉಲ್ಲೇಖಿಸಿತ್ತು.
ಚೀನೀ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಹುಲಿಯನ್ನು ಶಕ್ತಿಯ ಲಾಂಛನಗಳಾಗಿ ನೋಡಲಾಗುತ್ತದೆ. ಪ್ರಾಚೀನ ವೈದ್ಯಕೀಯ ಸಾಹಿತ್ಯದಲ್ಲಿ ಹುಲಿ ಮೂಳೆಗಳನ್ನು ಸಂಧಿವಾತ ಮತ್ತು ಅಪಸ್ಮಾರ ಸೇರಿದಂತೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಿದ ಬಗ್ಗೆ ಉಲ್ಲೇಖವಿದೆ.

TAGGED:Tiger Urine Huge Demand for Tiger Urine: A New Business That Has Created A Wave
Share This Article
Facebook Twitter Copy Link Print
Previous Article UPI Transaction ಫೆ. 1 ರಿಂದ ನಿಮ್ಮ UPI ಐಡಿ ಈ ರೀತಿ ಇದ್ದರೆ ಹಣ ವರ್ಗಾವಣೆ ಆಗಲ್ಲ
Next Article ಕರ್ನಾಟಕದಲ್ಲಿ ತಾಲಿಬಾನ್ ಮಾದರಿ ಕೃತ್ಯ

Popular Posts

Ayodhya Ram Mandir ದೇಣಿಗೆ ವಿವಾದದ ಬೆನ್ನಲ್ಲೇ ಜುಲೈ 22 ರಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ

1 Min Read

Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

1 Min Read

Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ

2 Min Read

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read
ದೇಶಆರೋಗ್ಯಪ್ರಮುಖ

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read
ದೇಶಪ್ರಮುಖ

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?