newsics.com
ಉತ್ತರಪ್ರದೇಶ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಮಗ, ವೃದ್ಧ ತಾಯಿಯನ್ನು ಬಂಡಿಯಲ್ಲಿ ಕೂರಿಸಿ, ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಲಿಯುಗದ ಶ್ರವಣ ಕುಮಾರನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬುಲಂದರ್‌ಶಹರ್‌ನ 65 ವರ್ಷದ ವ್ಯಕ್ತಿಯೊಬ್ಬರು 92 ವರ್ಷ ವಯಸ್ಸಿನ ತನ್ನ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ ಮಹಾಕುಂಭಮೇಳಕ್ಕೆ ಕರೆದೊಯ್ದಿದ್ದಾರೆ. ತಾನು ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಬೇಕೆಂದು ತಾಯಿ ಮಗನ ಬಳಿ ಹೇಳಿಕೊಂಡಿದ್ದು, ತಾಯಿಯ ಆಸೆಯನ್ನು ಇಡೇರಿಸಲೇಬೇಕೆಂದು ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಮಗ, ವೃದ್ಧ ತಾಯಿಯನ್ನು ಬಂಡಿಯಲ್ಲಿ ಕೂರಿಸಿ, ಸ್ವತಃ ತಾನೇ ಬಂಡಿಯನ್ನು ಎಳೆದೊಯ್ಯುವ ಮೂಲಕ ಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
https://twitter.com/ians_india/status/1884298359370121573
ವರದಿಗಳ ಪ್ರಕಾರ 13 ದಿನಗಳ ಕಾಲ ಪ್ರಯಾಣ ಮಾಡುವ ಮೂಲಕ ಅವರು ಪ್ರಯಾಗ್‌ರಾಜ್‌ಗೆ ತಲುಪಲಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹರಿದು ಬಂತು ಮೆಚ್ಚುಗೆಯ ಮಹಾಪುರ.