newsics.com
ಬೆಂಗಳೂರು: ನಗರದ ಕೊಡಿಗೇಹಳ್ಳಿಯ ಸ್ಥಳೀಯರು ಹಾಗೂ ಲಾಯರ್ ಜಗದೀಶ್ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ರಾತ್ರಿಯೇ ಬಿಗ್ ಬಾಸ್ ಕಬ್ಬಡ 11ನೇ ಸೀಸನ್‌ನ ಸ್ಪರ್ಧಿ, ಲಾಯರ್ ಜಗದೀಶ್, ಪುತ್ರ ಹಾಗೂ ಇಬ್ಬರು ಗನ್‌ಮ್ಯಾನ್‌ಗಳನ್ನು ಬಂಧಿಸಿದ್ದಾರೆ.
ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರು ಗಾಯಗೊಂಡಿದ್ದರು. ಅವರ ಮೂಗಿನಿಂದ ರಕ್ತ ಬರುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿದ್ದರು.
ಕೊಡಿಗೆಹಳ್ಳಿಯಲ್ಲಿ ಕೂಡ ಅಣ್ಣಮ್ಮ ದೇವಿಯ ಉತ್ಸವ ಆಯೋಜಿಸಲಾಗಿತ್ತು. ಕೊಡಿಗೆಹಳ್ಳಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಿದ್ದರು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಸ್ತೆಗೆ ಅಡ್ಡವಾಗಿ ಪೆಂಡಾಲ್ ಹಾಕಲಾಗಿದೆ ಎಂದು ಲಾಯರ್ ಜಗದೀಶ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಲಾಯರ್ ಜಗದೀಶ್ ಪೊಲೀಸರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಲಾಯರ್ ಜಗದೀಶ್ ದೂರು ನೀಡಿರುವುದಕ್ಕೆ ಕೋಪಗೊಂಡ ಸ್ಥಳೀಯರು ಈ ಬಗ್ಗೆ ಮಾತನಾಡಲು ಅವರ ಮನೆ ಬಳಿ ತೆರಳಿದ್ದರು. ಈ ವೇಳೆ ಗಲಾಟೆಯಾಗಿದ್ದು, ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೇ ಜ.23ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಾಗರಾಜ್ ಎನ್ನುವವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಜತೆಗೆ ಲಾಯರ್ ಜಗದೀಶ್ ವಿರುದ್ಧ ಕೂಡ ಪ್ರತಿದೂರು ದಾಖಲಾಗಿತ್ತು.
ಶುಕ್ರವಾರ ಮತ್ತೆ ಕೊಡಿಗೆಹಳ್ಳಿಯ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿ ಜೋರಾಗಿದ್ದು, ಗಲಾಟೆಯಲ್ಲಿ ಲಾಯರ್ ಜಗದೀಶ್ ಗಾಯಗೊಂಡಿದ್ದರು.
ಪ್ರಕರಣದಲ್ಲಿ ದೂರು ಹಾಗೂ ಪ್ರತಿ ದೂರು ಎರಡೂ ದಾಖಲಾದ ಕಾರಣ ಗಲಾಟೆಯಲ್ಲಿ ಗಾಯಗೊಂಡಿದ್ದ ಲಾಯರ್ ಜಗದೀಶ್‌ಗೆ ಪೊಲೀಸರೇ ಚಿಕಿತ್ಸೆ ಕೊಡಿಸಿ ವೈದ್ಯಕೀಯ ತಪಾಸಣೆ ಮಾಡಿಸಿ ಬಂಧಿಸಿದ್ದಾರೆ.
Cyber crime ಬ್ಯಾಂಕ್‌ನಲ್ಲೂ ಸೈಬರ್ ದರೋಡೆ: 2 ಕೋಟಿಗೂ ಹೆಚ್ಚು ಹಣ ವಂಚಕರ ಪಾಲು, ಖಾತೆದಾರರು ಕಂಗಾಲು
ಲಾಯರ್ ಜಗದೀಶ್ ಮೇಲೆ ಮತ್ತೆ ಹಲ್ಲೆ, ಮೂಗಿನಿಂದ ರಕ್ತ ಬರುವಂತೆ ಹೊಡೆದ್ರು..