newsics.com
ಬೆಂಗಳೂರು: ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಶೂಟೌಟ್ ಮಾಡಿದ್ದಾಯ್ತು, ಮಂಗಳೂರಿನ ಉಳ್ಳಾಲದಲ್ಲಿ ಕೋಟೆಕಾರು ಬ್ಯಾಂಕ್ ದರೋಟೆ ಆಯ್ತು, ಇದೀಗ ವಿಜಯನಗರದಲ್ಲಿಯೂ ಬ್ಯಾಂಕ್‌ನಲ್ಲಿ ಸೈಬರ್ ದರೋಡೆ ನಡೆದಿದೆ.
ಸಹಕಾರಿ ಬ್ಯಾಂಕೊಂದರಿಂದ ಸೈಬರ್ ವಂಚಕರು 2 ಕೋಟಿ ರೂಪಾಯಿಗೂ ಹೆಚ್ಚು ದರೋಡೆ ನಡೆಸಿರುವುದು ತಡವಾಗಿ ವರದಿಯಾಗಿದೆ.
ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ನ ಕೆಲವು ಶಾಖೆಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎಂದು ದೂರುಗಳನ್ನು ಸಲ್ಲಿಸಿದ ನಂತರ ದೊಡ್ಡ ಮೊತ್ತದ ಹಣ ದರೋಡೆಯಾಗಿರುವುದು ಪತ್ತೆಯಾಗಿದೆ.
ಬಿಡಿಸಿಸಿ ಬ್ಯಾಂಕ್‌ನಿಂದ ಐಡಿಬಿಐ ಬ್ಯಾಂಕ್‌ಗೆ ವಾಡಿಕೆಯಂತೆ ಹಣ ವರ್ಗಾವಣೆಯ ಸಮಯದಲ್ಲಿ, 2025 ರ ಜನವರಿ 10 ರಂದು ಹ್ಯಾಕರ್‌ಗಳು ಎಕ್ಸ್ಎಂಎಲ್ ಫೈಲ್‌ಗಳಲ್ಲಿನ ಖಾತೆ ಸಂಖ್ಯೆಗಳು ಮತ್ತು ಐಎಫ್ಎಸ್ಸಿ ಕೋಡ್‌ಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫಲಾನುಭವಿಗಳ ಹೆಸರುಗಳು ಬದಲಾಗದೆ ಉಳಿದಿದ್ದರೂ, ಯಾರ ಖಾತೆಗೆ ಹಣ ವರ್ಗಾವಣೆಯಾಗಬೇಕಿತ್ತೋ ಅವುಗಳ ಬದಲಿಗೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿನ 25 ವಿಭಿನ್ನ ಖಾತೆಗಳಿಗೆ ಹಣ ಜಮೆ ಆಗಿರುವುದು ಗೊತ್ತಾಗಿದೆ.
ಜನವರಿ 10 ರಿಂದ ಆನ್‌ಲೈನ್ ಹಣ ವರ್ಗಾವಣೆಗಳು ಉದ್ದೇಶಿತ ಗ್ರಾಹಕರ ಖಾತೆಗಳಿಗೆ ಜಮೆಯಾಗಿಲ್ಲ ಎಂಬ ಬಗ್ಗೆ ಹಲವು ಶಾಖೆಗಳು ವರದಿ ಮಾಡಿದ ನಂತರ ಜನವರಿ 13ರಂದು ಆನ್ಲೈನ್ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳು ಇತರ ಖಾತೆಗಳಿಗೆ ಜಮೆ ಆಗಿರುವುದು ಬ್ಯಾಂಕ್‌ನ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಬ್ಯಾಂಕ್ ತನ್ನ ಆರ್‌ಟಿಜಿಎಸ್/ನೆಫ್ಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ಪ್ರಕರಣವನ್ನು ಬಳ್ಳಾರಿ ಸಿಇಎನ್ (ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
IAS officers transfer 12 ಐಎಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ