newsics.com
ನವದೆಹಲಿ: ಒಲಿಂಪಿಯನ್ ಪದಕ ವಿಜೇತ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾನಿ ಜತೆ ವಿವಾಹವಾಗುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನೀರಜ್ ಚೋಪ್ರಾ ಅವರು, ನಮ್ಮನ್ನು ಈ ಕ್ಷಣಕ್ಕೆ ಕರೆತಂದ ಪ್ರತಿ ಆಶೀರ್ವಾದಕ್ಕೂ ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ ಬಂಧಿಯಾಗಿದ್ದೇನೆ, ಎಂದೆಂದಿಗೂ ಸಂತೋಷದಿಂದಿದ್ದೇನೆ ಎಂದಿದ್ದಾರೆ.
ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಪ್ರಸ್ತುತ USAನಲ್ಲಿ ಓದುತ್ತಿದ್ದಾರೆ. ಖಾಸಗಿ ಸಮಾರಂಭದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ನೀರಜ್ ಮದುವೆ ಕುರಿತು ಯಾರಿಗೂ ಯಾವುದೇ ಸುಳಿವು ಇರಲಿಲ್ಲ. ಆಪ್ತರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆರತಕ್ಷತೆ ಕಾರ್ಯಕ್ರಮ ಕೂಡ ಇರುತ್ತದೆ ಎಂದು ನೀರಜ್ ಮಾವ ತಿಳಿಸಿದ್ದಾರೆ.
ವೃತ್ತಿಪರವಾಗಿ, ನೀರಜ್ ಕಾಂಟಿನೆಂಟಲ್ ಟೂರ್ ಜಾವೆಲಿನ್-ಓನ್ಲಿ ಸ್ಪರ್ಧೆಯನ್ನು ದೇಶಕ್ಕೆ ತರುತ್ತಿದ್ದಾರೆ. ಮುಂಬರುವ ಕಾರ್ಯಕ್ರಮವನ್ನು ವರ್ಲ್ಡ್ ಅಥ್ಲೆಟಿಕ್ಸ್, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಕೂಡ ಅನುಮೋದಿಸಿದೆ.
ಸ್ಥಳ ಇನ್ನೂ ನಿರ್ಧಾರವಾಗಿಲ್ಲವಾದರೂ, ಈ ಕಾರ್ಯಕ್ರಮ ಮೇನಲ್ಲಿ ನಡೆಯಲಿದೆ. ಚೋಪ್ರಾ ನೇತೃತ್ವದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾರತದ ನೆಲದಲ್ಲಿ ಸ್ಪರ್ಧಿಸಲಿದ್ದಾರೆ.
ನೀರಜ್ ಪ್ರಸ್ತುತ ಹೊಸ ಋತುವಿಗೆ ಸಿದ್ಧರಾಗುತ್ತಿದ್ದಾರೆ. ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ 2024 ರಲ್ಲಿ ಅಂಡರ್ಸನ್ ಪೀಟರ್ಸ್ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ನೀರಜ್ ಭಾರತಕ್ಕೆ ಏಕೈಕ ರಜತ ಪದಕವನ್ನು ತಂದುಕೊಟ್ಟರು. ಕಳೆದ ಒಲಿಂಪಿಕ್ಸ್‌ನಲ್ಲಿ ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಜಾವೆಲಿನ್ ಪಟು ನೀರಜ್ ಚೋಪ್ರಾ ಹಾಗೂ ಶೂಟರ್ ಮನು ಭಾಕರ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣ ಸೇರಿ ಇತರ ವೇದಿಕೆಗಳಲ್ಲಿ ಇವರಿಬ್ಬರ ರಿಲೇಶನ್‌ಶಿಪ್‌ಗೆ ಪುಷ್ಠಿ ನೀಡುವ ಅಂಶಗಳು ಪತ್ತೆಯಾಗಿತ್ತು. ಆದರೆ ಈ ಮಾತುಗಳು ಕೇಳಿಬರುತ್ತಿರುವ ನಡುವೆ ನೀರಜ್ ಚೋಪ್ರಾ ಸದ್ದಿಲ್ಲದೆ ಹಿಮಾನಿ ಅವರನ್ನು ಮದುವೆಯಾಗಿದ್ದಾರೆ.
https://x.com/ANI/status/1881016259640504371?t=zx_CYLWehnTLiwTdApglFQ&s=19
Mahakumbh ಮಹಾಕುಂಭ ಮೇಳ ಸುಂದರಿ ಮೊನಾಲಿಸಾ! ಸದ್ಯದ ಪಾಡು ಯಾರಿಗೂ ಬೇಡ! ವಿಡಿಯೋ ನೋಡಿ
BMW ಕಾರಿನಲ್ಲಿ ಬಂದು ಚಾಟ್ಸ್ ವ್ಯಾಪಾರ ಮಾಡ್ತಾರೆ ಕೋಟ್ಯಧಿಪತಿಯಾದ ಚಾಟ್‌ವಾಲಾ!