Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > BMW ಕಾರಿನಲ್ಲಿ ಬಂದು ಚಾಟ್ಸ್ ವ್ಯಾಪಾರ ಮಾಡ್ತಾರೆ ಕೋಟ್ಯಧಿಪತಿಯಾದ ಚಾಟ್‌‌ವಾಲಾ!
ದೇಶವೈರಲ್

BMW ಕಾರಿನಲ್ಲಿ ಬಂದು ಚಾಟ್ಸ್ ವ್ಯಾಪಾರ ಮಾಡ್ತಾರೆ ಕೋಟ್ಯಧಿಪತಿಯಾದ ಚಾಟ್‌‌ವಾಲಾ!

Share
1 Min Read
SHARE

newsics.com

ಬೆಂಗಳೂರು : ರಸ್ತೆ ಬದಿ ಚಾಟ್ ಮಾರಿಕೊಂಡೇ ಕೋಟ್ಯಾಧಿಪತಿಯಾದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ದೆಹಲಿಯ ಜನಸಂದಣಿ ಭರಿತ ಪ್ರದೇಶವಾದ ನೆಹರು ಪ್ಲೇಸ್‌ನಲ್ಲಿ ಶರ್ಮಾ ಚಾಟ್ ಹೆಸರಿನ ಚಾಟ್ ಸೆಂಟರ್ ಅಲ್ಲಿರುವ ಟೆಕ್ ಉದ್ಯೋಗಿಗಳಿಗೆ, ಓಡಾಡುವವರಿಗೆ ಮೆಚ್ಚಿನ ತಾಣವಾಗಿದೆ.

ಶರ್ಮಾ ಚಾಟ್ ಅನ್ನು ನಡೆಸುತ್ತಿರುವವರು ಮುಖೇಶ್ ಶರ್ಮಾ. ಇವರಿಗೆ ಕೋಟ್ಯಾಧಿಪತಿ ಚಾಟ್‌ವಾಲಾ ಎಂಬ ಹೆಸರೂ ಇದೆ. ಚಾಟ್ ವ್ಯಾಪಾರದಲ್ಲಿಯೇ ಕೋಟ್ಯಾಧಿಪತಿಯಾದ ಮುಖೇಶ್ ಶರ್ಮಾ, ತಮ್ಮ ವಿಭಿನ್ನ, ವಿಶಿಷ್ಟ ರುಚಿಯ ಚಾಟ್‌ಗಳಿಂದ ಅಸಂಖ್ಯ ಗ್ರಾಹಕರ ಮನ ಗೆದ್ದಿದ್ದಾರೆ.

ಒಂದು ಟೇಬಲ್ ಹಾಕಿ ತಮ್ಮ ಕಾರಿನಲ್ಲಿ ತುಂಬಿಕೊಂಡು ಬಂದ ತರೇಹವಾರಿ ಚಾಟ್ ತಿನಿಸುಗಳನ್ನಿರಿಸಿಕೊಂಡು ಶರ್ಮಾಜಿ ಚಾಟ್‌ ಮಾರಲು ಆರಂಭಿಸುತ್ತಾರೆ. ಚಿಕ್ಕದಾಗಿ ಆರಂಭಿಸಿದ ಚಾಟ್ ವ್ಯವಹಾರ ಇಂದು ಶರ್ಮಾ ಅವರನ್ನು ಕೋಟ್ಯಾಧಿಪತಿಯನ್ನಾಗಿಸಿದೆ.

1989 ರಲ್ಲಿ ದಹಿ ಭಲ್ಲಾ ಮೂಲಕ ತಮ್ಮ ವ್ಯಾಪಾರ ಆರಂಭಿಸಿದ ಶರ್ಮಾ, ಆ ಕಾಲದಲ್ಲಿ ಒಂದು ಪ್ಲೇಟ್‌ಗೆ 2 ರೂ ವಿಧಿಸುತ್ತಿದ್ದರು. ಆದರೀಗ ಒಂದು ಪ್ಲೇಟ್‌ಗೆ ರೂ 40 ರಂತೆ ದಹಿ ಭಲ್ಲಾ ಮಾರಾಟ ಮಾಡುತ್ತಾರೆ. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಾ ರುಚಿಯಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದೆ ಅಂದಿನಿಂದ ಇಂದಿನವರೆಗೆ ಶರ್ಮಾ ಚಾಟ್ ಬ್ಯುಸಿನೆಸ್ ಮಾಡಿಕೊಂಡು ಬರುತ್ತಿದ್ದಾರೆ. ಶರ್ಮಾಜಿ ತಮ್ಮ ಬಿಎಮ್‌ಡಬ್ಲ್ಯೂ ಕಾರಿನಲ್ಲಿ ಬಂದು ಸ್ಟಾಲ್ ಹಾಕುತ್ತಾರೆ. ಇದರಿಂದಾಗಿಯೇ ಅವರು ಸಾಮಾಜಿಕ ತಾಣದಲ್ಲಿ ಬಹುಬೇಗನೇ ಸುದ್ದಿಯಾದರು.

Share This Article
Facebook Twitter Copy Link Print
Previous Article ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
Next Article Mahakumbh ಮಹಾಕುಂಭ ಮೇಳ ಸುಂದರಿ ಮೊನಾಲಿಸಾ! ಸದ್ಯದ ಪಾಡು ಯಾರಿಗೂ ಬೇಡ! ವಿಡಿಯೋ ನೋಡಿ

Popular Posts

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?