newsics.com
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಶಬ್ದ ಬಳಸಿರುವುದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಇದೀಗ ವಾಯ್ಸ್ ಸ್ಯಾಂಪಲ್ ನೀಡುವಂತೆ ಸಿ.ಟಿ. ರವಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದ ಸಿಟಿ ರವಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಸಿ.ಟಿ.ರವಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿಸಿದ್ದರು.
ಈ ಸಂಬಂಧ ಶುಕ್ರವಾರ (ಜ.17) ಸಿ.ಟಿ. ರವಿ ಪರ ವಕೀಲರು ಕೋರ್ಟ್‌ಗೆ ಹಾಜರಾಗಿದ್ದು, ಸಿಟಿ ರವಿಯವರಿಗೆ ಒಂದೇ ದಿನ ಎರಡು ನೋಟಿಸ್ ನೀಡಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ನಿಮಗೆ ಅಕ್ಷೇಪಣೆ ಇದ್ದರೆ ಸಲ್ಲಿಸಿ. ಇಲ್ಲ ಆದೇಶ ಮಾಡುತ್ತೇನೆ. ಹೋಗಿ ವಾಯ್ಸ್ ಸ್ಯಾಂಪಲ್ ನೀಡಿ. ವಾಟ್ಸ್ಯಾಪ್ನಲ್ಲಿ ನೊಟೀಸ್ ಬಂದಿದೆ ಎನ್ನುತ್ತೀರಿ. ನೀವು ಹೇಗೆ ಹಾಜರಾಗಿದ್ದೀರಿ? ನಾಳೆ ನೀವು ತಿಳಿಸಬೇಕು. ಇಲ್ಲ ಆದೇಶ ಮಾಡಲಾಗುತ್ತೆ ಎಂದು ಕೋರ್ಟ್ ಸಿಟಿ ರವಿ ಪರ ವಕೀಲರಿಗೆ ಖಡಕ್ ಆಗಿ ಹೇಳಿದೆ.
ಸಿಟಿ ರವಿ ಪರ ವಕೀಲರು, ದಯವಿಟ್ಟು ಬೇರೆ ದಿನ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಯಾಕೆ ನಿಮಗೆ ಬೇರೆ ದಿನ ಬೇಕು ಎಂದು ಪ್ರಶ್ನಿಸಿದೆ. ಇದಕ್ಕೆ ನಮಗೆ ಇನ್ನೂ ಫೈಲ್ ಸಿಕ್ಕಿಲ್ಲ ಎಂದು ಸಿ.ಟಿ. ರವಿ ಪರ ವಕೀಲರು ತಿಳಿಸಿದರು. ನಂತರ ಕೋರ್ಟ್, ಇಂದೇ ಅವರಿಗೆ(ಸಿಟಿ ರವಿ ಪರ ವಕೀಲರಿಗೆ) ಕಾಪಿ ಕೊಡಿ ಎಂದು ಸಿಐಡಿ ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದರು. ಬೇಕಿದ್ರೆ ವಾಯ್ಸ್ ಸ್ಯಾಂಪಲ್ ಕೊಡಿ. ವಿಚಾರಣೆ ದಿನಾಂಕವನ್ನು ಐಓ ಹತ್ತಿರ ಕೇಳಿಕೊಳ್ಳಿ ಎಂದರು. ಹೀಗಾಗಿ ರವಿ ಇದೀಗ ತಮ್ಮ ವಾಯ್ಸ್ ಸ್ಯಾಂಪಲ್ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮತ್ತೊಂದೆಡೆ ಪರಿಷತ್ ಸದಸ್ಯ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಈ ಧ್ವನಿ ಸಿಟಿ ರವಿ ಅವರದ್ದೇ, ಅಲ್ಲವೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯ ಖಚಿತಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಎಪಿಆರ್) ನೀಡಿದ್ದ ಸದನದ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
Namma metro ಮೆಟ್ರೋ ಪ್ರಯಾಣ ದರ ಶೇ.40-45 ಹೆಚ್ಚಳ, ಶನಿವಾರ ಅಧಿಕೃತ ಘೋಷಣೆ, ಜ.20ರಿಂದ ಜಾರಿ ಸಾಧ್ಯತೆ
Panipuri ಪಾನಿಪುರಿ ಇಷ್ಟಾನಾ? ನಿಶ್ಚಿಂತರಾಗಿ ತಿನ್ನಿ, ದೇಹಕ್ಕೂ ಒಳ್ಳೆಯದು!
Kharge warning ಬಾಯಿ ಮುಚ್ಕೊಂಡಿರಿ: ರಾಜ್ಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ