newsics.com
ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೆಲಕಾಲ ಆ್ಯಪಲ್ ಕಂಪನಿಯ ಸಂಸ್ಥಾಪಕ ದಿ. ಸ್ಟೀವ್ ಜಾಬ್ ಪತ್ನಿ ಪೊವೆಲ್ ಜಾಬ್ ಅಸ್ವಸ್ಥರಾಗಿದ್ದರು.
ಹೌದು, ಈ ಕುಂಭಮೇಳದಲ್ಲಿ ಸಾಧು-ಸಂತರು ಸೇರಿದಂತೆ ದೇಶ-ವಿದೇಶಗಳ ಗಣ್ಯರು, ಅತಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಅದೇ ರೀತಿ ಆ್ಯಪಲ್ ಕಂಪನಿಯ ಸಂಸ್ಥಾಪಕರಾಗಿದ್ದ ದಿ. ಸ್ಟೀವ್ ಜಾಬ್ ಪತ್ನಿ ಪೊವೆಲ್ ಜಾಬ್ ಅವರು ಈ ಬಾರಿಯ ಭಾಗವಹಿಸಿದ್ದಾರೆ.
‘ಪೊವೆಲ್ ಜಾಬ್ ಅವರು ಇದುವರೆಗೆ ಇಷ್ಟು ದೊಡ್ಡ ಜನಸಂದಣಿಯನ್ನು ನೋಡಿರಲಿಲ್ಲ. ಸದ್ಯ ಅವರು ಅಲರ್ಜಿಯಿಂದ ಬಳಲುತ್ತಿದ್ದು, ಕ್ಯಾಂಪ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ನಿರಂಜನಿ ಆಖಾರದ ಮಹಾಮಂಡಳೇಶ್ವರದ ಸ್ವಾಮಿ ಕೈಲಾಸಾನಂದ ತಿಳಿಸಿದ್ದಾರೆ.
‘ಆರೋಗ್ಯ ಚೇತರಿಸಿಕೊಂಡ ಬಳಿಕ ಪೊವೆಲ್ ಜಾಬ್ ಅವರಿಗೆ ಪ್ರತ್ಯೇಕವಾಗಿ ಸ್ನಾನ ಮಾಡಲು ವ್ಯವಸ್ಥೆ ಮಾಡುತ್ತೇವೆ’ ಎಂದೂ ಸ್ವಾಮಿ ಹೇಳಿದ್ದಾರೆ.