newsics.com
ಚಿಕ್ಕಮಗಳೂರು: ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರಾಟ, ಇಬ್ಬರ ಬಂಧನ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಸ್ವೀಟ್ ಅಂಗಡಿಯಲ್ಲಿ ಗೋಮಾಂಸದ ಅಕ್ರಮ ಮಾರಾಟ ನಡೆಯುತ್ತಿರುವುದು ಬಹಿರಂಗಗೊಂಡಿದೆ.
ಅಸ್ಸಾಂನಿಂದ ಬಂದ ಇಬ್ಬರು ವ್ಯಕ್ತಿಗಳು ಸ್ವೀಟ್ ಮಾರಾಟದ ಜೊತೆಗೆ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ವೀಟ್ ಡಬ್ಬದ ಪಕ್ಕದಲ್ಲಿರುವ ಬ್ಲ್ಯಾಕ್ ಬ್ಯಾಗ್ನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಗೋಮಾಂಸ ಸಮೇತ ಮಾರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.