newsics.com
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10ರಿಂದ 14ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯ ಹೊಂದಿದೆ.
ಎಕ್ಸ್‌ನಲ್ಲಿ ಏರೋ ಇಂಡಿಯಾ ಮಾಹಿತಿ ಹಂಚಿಕೊಂಡಿದ್ದು, ಏರೋ ಇಂಡಿಯಾ 2025 – ವಾಯು ಶಕ್ತಿಯ ಮಹಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ.
ಮುಂಬರುವ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದೆ.
ಭಾರತದ ಅತ್ಯಾಧುನಿಕ ತಂತ್ರಜ್ಞಾನ, ವಾಯುಪಡೆಯ ಶಕ್ತಿ ಮತ್ತು ನಮ್ಮ ರಾಷ್ಟ್ರದ ಭದ್ರತೆಗೆ ಸಮರ್ಪಿತವಾದ ಶಕ್ತಿಯನ್ನು ಪ್ರದರ್ಶಿಸುವ ವಿಸ್ಮಯಕಾರಿ ಮತ್ತು ಜಾಗತಿಕವಾಗಿ ಆಕರ್ಷಿಸುವ ಏರ್ ಶೋಗೆ ಸಾಕ್ಷಿಯಾಗಿ! ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ರಕ್ಷಣೆಯಲ್ಲಿ ಭಾರತ ಎಷ್ಟು ಮುಂದುವರಿದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ ಮತ್ತು ಶಾಂತಿಯ ಈ ಭವ್ಯ ಪ್ರದರ್ಶನವನ್ನು ತಪ್ಪಿಸಿಕೊಳ್ಳಬೇಡಿ ಎಂಬುದಾಗಿ ಮನವಿ ಮಾಡಿದೆ.
ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರು https://www.aeroindia.gov.in/visitor-registration ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
https://x.com/DDChandanaNews/status/1876230661272650213?t=tgizMoJTx7jX27_Iw2fHzQ&s=19
ಧರ್ಮಸ್ಥಳದಲ್ಲೂ ತಿರುಪತಿ ಮಾದರಿ ಕ್ಯು ವ್ಯವಸ್ಥೆ: ಹೊಸ ಸಂಕೀರ್ಣ ಮಂಗಳವಾರ ಉದ್ಘಾಟನೆ
ನಿಮ್ಮ ದೇಹದಲ್ಲಿ ಅಪಾಯಕಾರಿ HMPV ವೈರಸ್ ಇದೆ ಎಂದು ಈ ರೋಗಲಕ್ಷಣಗಳು ಸೂಚಿಸುತ್ತವೆ