newsics.com
ನವದೆಹಲಿ: ಬೆಳ್ಳಿಗೂ ಚಿನ್ನದ ರೀತಿಯಲ್ಲೇ ಹಾಲ್ ಮಾರ್ಕ್ ನಿಯಮ ಅಳವಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಖರೀದಿದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಚಿನ್ನದ ರೀತಿಯಲ್ಲೇ ಬೆಳ್ಳಿ ನಾಣ್ಯಗಳು ಮತ್ತು ಆಭರಣಗಳ ಮೇಲೆ ಹಾಲ್‌ಮಾರ್ಕ್ ಮಾಡುವ ನಿಯಮವನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಈಗ ಬೆಳ್ಳಿಯಿಂದ ಮಾಡಿದ ವಸ್ತುಗಳ ಮೇಲೆ ಹಾಲ್‌ಮಾರ್ಕ್ ನಿಯಮ ಜಾರಿಗೆ ತರಲಾಗುವುದು. ಸೂಕ್ತ ಸಮಾಲೋಚನೆ ಬಳಿಕವೇ ಅಂತಿಮ ತೀರ್ಮಾನಕ್ಕೆ ಬರುವುದಾಗಿ ಜೋಶಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿದ ಪ್ರಹ್ಲಾದ್ ಜೋಶಿ, ಗ್ರಾಹಕರು ಮತ್ತು ಪಾಲುದಾರರೊಂದಿಗಿನ ಸುದೀರ್ಘ ಸಮಾಲೋಚನೆ ಬಳಿಕ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು.
ಬೆಳ್ಳಿಗೆ ಹಾಲ್‌ಮಾರ್ಕ್ ಮಾಡುವ ವಿಚಾರವಾಗಿ ನಾವು ಬೇಡಿಕೆಗಳನ್ನು ಸ್ವೀಕರಿಸಿದ್ದೇವೆ. ಚಿನ್ನದ ಹಾಲ್‌ಮಾರ್ಕಿಂಗ್ ನಂತರ ಗ್ರಾಹಕರಿಗೆ ಆಗುವ ನಷ್ಟ ಗಣನೀಯವಾಗಿ ತಗ್ಗಿರುವುದರಿಂದ ಬೆಳ್ಳಿಗೂ ಹಾಲ್‌ಮಾರ್ಕ್ ಕಡ್ಡಾಯ ಮಾಡುವಂತೆ ಬೇಡಿಕೆ ಮಂಡಿಸಲಾಗಿದೆ. ಆದರೆ ನಾವು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರವೇ ಪ್ರಕ್ರಿಯೆ ಆರಂಭಿಸುತ್ತೇವೆ. ವ್ಯಾಪಾರ ಮಧ್ಯಸ್ಥಿಕೆಗಾರರೊಂದಿಗೂ ನಾವು ಸಮಾಲೋಚನೆ ನಡೆಸುತ್ತೇವೆ ಎಂದು ಜೋಶಿ ಹೇಳಿದರು.
ಗುಜರಾತ್‌ನಲ್ಲೂ HMPV ಪತ್ತೆ, 2 ತಿಂಗಳ ಮಗುವಿಗೆ ಸೋಂಕು, ದೇಶದಲ್ಲಿ ಒಂದೇ ದಿನ 3 ಪ್ರಕರಣ ಪತ್ತೆ