newsics.com
ಛತ್ತೀಸ್‌ಗಢ: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ವಾಹನ ಗುರಿಯಾಗಿಸಿಕೊಂಡು ಸುಧಾರಿತ ಐಇಡಿಯನ್ನು ಮಾವೋವಾದಿ ನಕ್ಸಲರು ಸ್ಪೋಟಿಸಲಾಗಿದೆ. ಈ ಘಟನೆಯಲ್ಲಿ 9 ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸಿಆರ್ ಪಿಎಫ್ ವಾಹನ ಗುರಿಯಾಗಿಸಿಕೊಂಡು ನಕ್ಸಲರಿಂದ ಐಇಡಿ ಸ್ಪೋಟಿಸಲಾಗಿದೆ.
ಸ್ಪೋಟದಲ್ಲಿ 9 ಯೋಧರು ಹುತಾತ್ಮರಾಗಿದ್ದಾರೆ. ಹಲವು ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಿಆರ್ ಪಿಎಫ್ ವಾಹನ ತೆರಳುತ್ತಿರುವ ಮಾಹಿತಿ ತಿಳಿದಂತ ನಕ್ಸಲರು ದಾರಿಯಲ್ಲಿ ಐಇಡಿ ಇರಿಸಿ ಸ್ಪೋಟಿಸಿದ್ದಾರೆ.