Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Guide lines ಬೆಂಗಳೂರಲ್ಲಿ HMPV ಎರಡು ಪ್ರಕರಣ ಪತ್ತೆ ಬೆನ್ನಲ್ಲೇ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ, ಗೈಡ್‌ ಲೈನ್ಸ್‌ನಲ್ಲೇನಿದೆ?
ಆರೋಗ್ಯಕರ್ನಾಟಕದೇಶಪ್ರಮುಖ

Guide lines ಬೆಂಗಳೂರಲ್ಲಿ HMPV ಎರಡು ಪ್ರಕರಣ ಪತ್ತೆ ಬೆನ್ನಲ್ಲೇ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ, ಗೈಡ್‌ ಲೈನ್ಸ್‌ನಲ್ಲೇನಿದೆ?

Share
2 Min Read
SHARE

newsics.com
ಬೆಂಗಳೂರು: ನಗರದ ಎಂಟು ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ 3 ತಿಂಗಳ ಹೆಣ್ಣು ಮಗುವಿನಲ್ಲೂ ವೈರಸ್ ಪತ್ತೆಯಾಗಿದ್ದು, ಬೆಂಗಳೂರಲ್ಲಿ ಒಂದೇ ದಿನ ದಾಖಲಾದ 2ನೇ ಪ್ರಕರಣ ಇದಾಗಿದೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.
ಎರಡೂ ಪ್ರಕರಣ ಕೂಡ ಪುಟ್ಟ ಕಂದಮ್ಮಗಳಲ್ಲೇ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಮೊದಲಿಗೆ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದ್ದರೆ, ಕೆಲವೇ ಹೊತ್ತಿನಲ್ಲಿ 3 ತಿಂಗಳ ಹೆಣ್ಣು ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆಯಲ್ಲಿ HMPV ವೈರಸ್ ಪತ್ತೆಯಾಗಿತ್ತು.

ಬೆಂಗಳೂರಲ್ಲಿ ಪತ್ತೆಯಾಗಿರುವ ವೈರಸ್ ಹೊಸದೇನಲ್ಲ. ಹೀಗಾಗಿ ಆತಂಕಪಡುವ ಅವಶ್ಯಕತೆ ಇಲ್ಲ ಎಂದಿರುವ ರಾಜ್ಯ ಆರೋಗ್ಯ ಇಲಾಖೆ, ಮಾರ್ಗಸೂಚಿ ಪ್ರಕಟಿಸಿದೆ.

ಎಚ್ಎಂಪಿವಿ ಪತ್ತೆ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದು ಚರ್ಚಿಸಿದ್ದಾರೆ. ರಾಜ್ಯದ ಜನರು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

ಚಳಿಗಾಲದಲ್ಲಿ ಈ ರೀತಿಯ ವೈರಸ್ ಕುರಿತು ಎಚ್ಚರಿಕೆ ಅಗತ್ಯ. ಇದು ಹೊಸದೇನಲ್ಲ. ಹಳೇ ವೈರಸ್. 2001ರಲ್ಲೇ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲೂ ಈ ವೈರಸ್ ಇದೆ. ಆದರೆ ಪರಿಣಾಕಾರಿಯಾಗಿಲ್ಲ. ಕೇವಲ ಶೇಕಡಾ 1ರಷ್ಟು ಮಾತ್ರ ತೀವ್ರತೆ ಇದೆ ಎನ್ನುವ ಮಾಹಿತಿ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಮ್ಯುನಿಟಿ ಕಡಿಮೆ ಇರುವ ಮಕ್ಕಳ ಮೇಲೆ ಈ ವೈರಸ್ ದಾಳಿ ಮಾಡಲಿದೆ. ಮಕ್ಕಳು ಹಾಗೂ ಹಿರಿಯರು ತೀವ್ರ ಮುಂಜಾಗ್ರತೆ ವಹಿಸಬೇಕು. ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚಿಸುತ್ತೇವೆ. ರಾಜ್ಯದ ಪ್ರಕರಣದ ಸ್ಯಾಂಪಲ್ ಪುಣೆಗೆ ಕಳುಹಿಸುವ ಕುರಿತು ಚರ್ಚಿಸುತ್ತೇವೆ ಎಂದು ದಿನೇಶ್ ಗಂಡೂರಾವ್ ಹೇಳಿದ್ದಾರೆ.

HMPV ವೈರಸ್ ಮಾರ್ಗಸೂಚಿ:

ಚೀನಾದಲ್ಲಿ ವರದಿಯಾಗಿರುವ HMPV ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.

ಉಸಿರಾಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ HMPV ವೈರಸ್ ಸಾಮಾನ್ಯವಾಗಿ ಮಕ್ಕಳು ಹಾಗೂ ಹಿರಿಯರಲ್ಲಿ ಹೆಚ್ಚಾಗಿ ಕಾಣಿಸಲಿದೆ. ಸದ್ಯದ ಪ್ರಕರಣಗಳ ಕುರಿತು ರಾಜ್ಯ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವೈರಸ್ ಕುರಿತು ಮುಂಜಾಗ್ರತೆಗಾಗಿ ಮಾರ್ಗಸೂಚಿ ಪ್ರಕಟಿಸಿದೆ.

ಏನು ಮಾಡಬೇಕು?:
ನೆಗಡಿ, ಕೆಮ್ಮು, ಶೀತದ ಸಂದರ್ಭದಲ್ಲಿ ಕರ್ಚೀಫ್, ಟಿಶ್ಯೂ ಪೇಪರ್ ಬಳಸಿ. ಕೆಮ್ಮುವಾಗ ಮೂಗು, ಬಾಯಿ ಮುಚ್ಚಿಕೊಳ್ಳಿ.

ನಿಮ್ಮ ಕೈಗಳನ್ನು ಸೋಪ್‌ನಿಂದ ಶುಚಿಯಾಗಿ ತೊಳೆಯಿರಿ. ಸ್ಯಾನಿಟೈಸರ್ ಬಳಸಿ.
ಜನಸಂದಣಿ ಪ್ರದೇಶಗಳಿಂದ ದೂರವಿರಿ.
ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದ ಜನರ ಸಂಪರ್ಕದಿಂದ ದೂರವಿರಿ.

ಮುಚ್ಚಿದ ಕೋಣೆಗಳಿಂದ ತೆರೆದ, ಗಾಳಿ, ಬೆಳಕು ಇರುವ ಕೊಠಡಿಗಳಲ್ಲಿರಿ. ಆರೋಗ್ಯ ಸಮಸ್ಯೆಗಳಿದ್ದರೆ ಮನೆಯಲ್ಲೇ ಇರಿ. ಜನರ ಸಂಪರ್ಕ ಮಾಡಬೇಡಿ. ಚೆನ್ನಾಗಿ ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸಿ.

ಏನು ಮಾಡಬಾರದು?:
ಬಳಸಿದ ಕರ್ಚೀಫ್, ಟಿಶ್ಯೂ ಪೇಪರ್ ಬಳಸಬೇಡಿ.
ಶೀತ, ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇದ್ದವರ ಜತೆ ಸಂಪರ್ಕ ಮಾಡಬೇಡಿ. ಟವೆಲ್ ಸೇರಿದಂತೆ ಇತರ ವಸ್ತುಗಳನ್ನು ಹಂಚಿಕೊಳ್ಳಬೇಡಿ.
ಮೂಗು, ಬಾಯಿ, ಕಣ್ಣುಗಳನ್ನು ಕೈಗಳಿಂದ ಪದೇ ಪದೇ ಮುಟ್ಟಬೇಡಿ.
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಬೇಡಿ.
ವೈದ್ಯರ ಭೇಟಿ ಮಾಡದೆ ಔಷಧಗಳನ್ನು ತೆಗೆದುಕೊಳ್ಳಬೇಡಿ.

ಈ‌ ಮಧ್ಯೆ, ಚೀನಾದಲ್ಲಿ HMPV ವೈರಸ್ ಪ್ರಕರಣ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇತ್ತ ಮಲೆಷಿಯಾದಲ್ಲೂ ಗಣನೀಯವಾಗಿ HMPV ವೈರಸ್ ಸಂಖ್ಯೆ ಏರಿಕೆಯಾಗುತ್ತಿದೆ.

ಬೆಂಗಳೂರಲ್ಲೂ ಚೀನಾದ ಹೊಸ ವೈರಸ್ HMPV ಪತ್ತೆ, ಭಾರೀ ಅತಂಕ, ತುರ್ತು ಸಭೆ ಕರೆದ ಸಚಿವ, ಮಾರ್ಗಸೂಚಿ ಪ್ರಕಟ ಸಾಧ್ಯತೆ

Bengaluru ಇಬ್ಬರು‌ ಮಕ್ಕಳನ್ನು ಕೊಂದು ತಂದೆ, ತಾಯಿ ಆತ್ಮಹ*ತ್ಯೆ

Cylinder blast ಮನೆಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಚಿಂತಾಜನಕ, ಮನೆ ಛಿದ್ರ ಛಿದ್ರ

TAGGED:Following the detection of two cases of HMPV in Bangalorethe government announced guidelineswhat is in the guidelines?
Share This Article
Facebook Twitter Copy Link Print
Previous Article Cylinder blast ಮನೆಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಚಿಂತಾಜನಕ, ಮನೆ ಛಿದ್ರ ಛಿದ್ರ
Next Article ಗುಜರಾತ್‌ನಲ್ಲೂ HMPV ಪತ್ತೆ, 2 ತಿಂಗಳ ಮಗುವಿಗೆ ಸೋಂಕು, ದೇಶದಲ್ಲಿ ಒಂದೇ ದಿನ 3 ಪ್ರಕರಣ ಪತ್ತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?