newsics.com
ಬೆಂಗಳೂರು : ಚೀನಾದಲ್ಲಿ ಹೆಚ್ಎಂಪಿವಿ ವೈರಸ್ ಹರಡುತ್ತಿರುವ ಬಗ್ಗೆ ಭಾರತದ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಜನರು ಆತಂಕಪಡುವ ಅಗತ್ಯವಿಲ್ಲ, ಯಾರು ಕೂಡ ಪ್ಯಾನಿಕ್ ಆಗಬೇಡಿ ಎಂದು ಕೇಂದ್ರ ಸರ್ಕಾರ ಹೇಳಿದೆ.
HMPV ವೈರಸ್ ಬೇರೆ ವೈರಸ್ಗಳಂತೆ ಶೀತ, ಕೆಮ್ಮು, ಜ್ವರಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರದ ಹೆಲ್ತ್ ಸರ್ವೀಸಸ್ನ ಡಿಜಿ ಡಾ. ಆತುಲ್ ಗೋಯಲ್ ಹೇಳಿಕೆ ನೀಡಿದ್ದಾರೆ.
ಆಸ್ಪತ್ರೆಗಳಲ್ಲಿ ಬೆಡ್, ಅಗತ್ಯ ಔಷಧಿ ಪೂರೈಕೆ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿದೆ. ಭಾರತ ಆರೋಗ್ಯ ಇಲಾಖೆ ನಿರಂತರವಾಗಿ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಂಪರ್ಕದಲ್ಲಿದೆ ದೇಶದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಆತುಲ್ ಗೋಯಲ್ ಹೇಳಿದ್ದಾರೆ.