newsics.com
ಅಮೇರಿಕಾ: ಕ್ರಿಸ್‌ಮಸ್ ಸ್ಟಾಕಿಂಗ್‌ನಲ್ಲಿ ಸಿಕ್ಕ ಲಾಟರಿ ಟಿಕೆಟ್ ಸ್ಕ್ರಾಚ್ ಮಾಡಿದಾಗ ಮಹಿಳೆಯೊಬ್ಬಳು $150,000 (₹1.28 ಕೋಟಿ) ಗೆದ್ದಿದ್ದಾರೆ.
ಅಮೆರಿಕದ ಲೋವಾದಲ್ಲಿರುವ ಮಹಿಳೆಯೊಬ್ಬರು ಕ್ರಿಸ್‌ಮಸ್ ಸಂಭ್ರಮದಲ್ಲಿ ಕಿತ್ತು ತಂದಿದ್ದ ಸಾಕ್ಸ್‌ಗಳನ್ನು ಕಳೆದ ತಿಂಗಳು ಚೆಕ್ ಮಾಡಿದ್ದಾಳೆ. ಇದರಲ್ಲಿ ಆಕೆಗೆ ಒಂದು ಲಾಟರಿ ಟಿಕೆಟ್ ಸಿಕ್ಕಿದೆ. ಲಾಟರಿ ಟಿಕೆಟ್ ಸಿಕ್ಕಿದ್ದು ಮೊದಲಿಗೆ ಆ ಮಹಿಳೆಗ ಖುಷಿ ನೀಡಿರಲಿಲ್ಲ. ಆದರೆ, ಈ ಲಾಟರಿ ಟಿಕೆಟ್‌ಅನ್ನು ಸ್ಕ್ರಾಚ್ ಮಾಡಿದಾಗ ಆಕೆಯ ಅದೃಷ್ಟವೇ ಬದಲಾಗಿ ಹೋಗಿದೆ. ಹೌದು ಆಕೆ ಸ್ಕ್ರಾಚ್ ಮಾಡಿದ ಲಾಟರಿಯು ಅದ್ಭುತ ಎನ್ನುವಂತೆ 1.50 ಲಕ್ಷ ಡಾಲರ್ ಅಂದರೆ, 1 ಕೋಟಿ 28 ಲಕ್ಷ 67, 577.50 ಪೈಸೆ ಗೆಲ್ಲುವಂತೆ ಮಾಡಿದೆ. ಕ್ರಿಸ್‌ಮಸ್ ಸ್ಟಾಕಿಂಗ್‌ನಿಂದ ಆಕೆ ಹೊರತೆಗೆದ ಲಾಟರಿ ಟಿಕೆಟ್ ಅವಳಿಗೆ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ತಂದು ಕೊಡುವ ಮೂಲಕ ರಾತ್ರೋರಾತ್ರಿ ಆಕೆ ಕೋಟ್ಯಧಿಪತಿ ಆಗಿದ್ದಾಳೆ.
ಟೇಲರ್ ಕ್ಯಾಫ್ರಿ ಹೆಸರಿನ ಮಹಿಳೆಯ ಗೆಲುವನ್ನು ಘೋಷಣೆ ಮಾಡಿರುವ ಲಾಟರಿ ಕಂಪನಿಯ ಸೋಶಿಯಲ್ ಮೀಡಿಯಾ ಪೇಜ್, ‘ಗ್ರಿಮ್ಸ್‌ನ ಟೇಲರ್ ಕ್ಯಾಫ್ರಿ ಈ ವರ್ಷದ ಕ್ರಿಸ್ಮಸ್ ಸ್ಟಾಕಿಂಗ್‌ನಲ್ಲಿ ಮನಿ ಗಿಫ್ಟ್ ಸ್ಕ್ರ್ಯಾಚ್ ಟಿಕೆಟ್ ಅನ್ನು ಸಂಪಾದಿಸಿದ್ದರು. ಈ ಲಾಟರಿ ಟಿಕೆಟ್‌ನಿಂದ $150,000 ಬಹುಮಾನವನ್ನು ಗೆದ್ದಿದ್ದಾರೆ. ಸಾಂಟಾ (ಅದು ನಿಜವಾಗಿಯೂ ಅವಳ ತಾಯಿ) ವೆಸ್ಟ್ ಡೆಸ್ ಮೊಯಿನ್ಸ್‌ನಲ್ಲಿರುವ ಹೈ-ವೀ ಫಾಸ್ಟ್ & ಫ್ರೆಶ್, 9150 SE ಯೂನಿವರ್ಸಿಟಿ ಅವೆನ್‌ನಲ್ಲಿ ವಿಜೇತ ಟಿಕೆಟ್ ಖರೀದಿಸಿದರು’ ಎಂದು ಬರೆದಿದೆ.