newsics.com
ನವದೆಹಲಿ: ಹೊಸ ವರ್ಷದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ.
ಇನ್ಮುಂದೆ, ಒಂದು ಪರ್ಸನಲ್ ಲೋನ್ ಪಡೆದ ಬಳಿಕ ಇನ್ಯಾವುದೇ ಬ್ಯಾಂಕ್‌ನಲ್ಲಿ ಅದೇ ವ್ಯಕ್ತಿ ಅದೇ ಸಮಯದಲ್ಲಿ ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಒಂದು ಪರ್ಸನಲ್ ಲೋನ್ ಚಾಲ್ತಿಯಲ್ಲಿರುವಾಗ ಮತ್ತೊಂದು ಪರ್ಸನಲ್ ಲೋನ್ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಆರ್‌ಬಿಐ ಕಡಿವಾಣ ಹಾಕಿ ನಿಯಮ ಬಿಗಿಗೊಳಿಸಿದೆ..
ಆದರೆ, ಪರ್ಸನಲ್ ಲೋನ್ ಪಡೆದ ಬಳಿಕ ಕಾರು ಸಾಲ ಅಥವಾ ಇನ್ಯಾವುದೇ ಇತರ ಸಾಲ ಪಡೆಯಲು ಅವಕಾಶವಿದೆ. ಆದರೆ ಸಾಲ ಪಡೆಯುವವನ ಆದಾಯ, ತೆಗೆದುಕೊಂಡಿರುವ ಸಾಲಕ್ಕೆ ಕಟ್ಟುತ್ತಿರುವ ಇಎಂಐ ಸೇರಿದಂತೆ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಬ್ಯಾಂಕ್ ಇದಕ್ಕಾಗಿ ಅನುಪಾತ ನಿಯಮವಿದೆ. ಈ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಿದೆ.
ಪರ್ಸನಲ್ ಲೋನ್‌ನಲ್ಲಿರುವ ನಿಯಮದಲ್ಲಿನ ಸಣ್ಣ ಲೋಪಗಳಿಂದ ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಅವಕಾಶ ಬಳಸಿ ಹೆಚ್ಚು ಸಾಲ ಪಡೆದು ದಿವಾಳಿಯಾಗುವ, ಸಾಲ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮದಲ್ಲಿ ಪರ್ಸನಲ್ ಲೋನ್ ಮೇಲೆ ಕಡಿವಾಣ ಹಾಕಲಾಗಿದೆ.
ಆರ್‌ಬಿಐ ಹೊಸ ನಿಯಮದ ಅಡಿಯಲ್ಲಿ ಸಾಲ ನೀಡುವ ಬ್ಯಾಂಕ್‌ಗಳು ಅಥವಾ ಇತರ ಸಂಸ್ಥೆಗಳು ಸಾಲ ಪಡೆದವನ ಮಾಹಿತಿ, ಸಾಲದ ಮೊತ್ತ, ಸಿಬಿಲ್ ಸ್ಕೋರ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು 15 ದಿನಗಳ ಒಳಗೆ ಅಪ್‌ಡೇಟ್ ಮಾಡಬೇಕು. ಈವರೆಗೆ 30 ದಿನಗಳ ಕಾಲಾವಕಾಶವಿತ್ತು. ಆದರೆ ಇದೀಗ 15 ದಿನಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಏಕಕಾಲಕ್ಕೆ ವಿವಿಧ ಬ್ಯಾಂಕ್‌ಗಳಲ್ಲಿ ಪರ್ಸನಲ್ ಲೋನ್ ಪಡೆಯುವುದು ತಪ್ಪಲಿದೆ ಎಂದು ಆರ್‌ಬಿಐ ಹೇಳಿದೆ.
ಇದುವರೆಗೆ ಸಾಲ ಪಡೆದ 40 ದಿನಗಳ ಬಳಿಕವೇ ಮತ್ತೊಂದು ಸಾಲ ನೀಡುವ ಬ್ಯಾಂಕ್‌ಗೆ ಈ ಕುರಿತು ಮಾಹಿತಿ ಲಭ್ಯವಾಗುತ್ತಿತ್ತು. ಇದರಿಂದ ಹಲವರು ಒಂದು ಬ್ಯಾಂಕ್‌ನಿಂದ ಪರ್ಸನಲ್ ಲೋನ್ ಪಡೆದು, ಮತ್ತೊಂದು ಬ್ಯಾಂಕ್‌ನಲ್ಲೂ ಅರ್ಜಿ ಹಾಕಿ ಸಾಲ ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದೆ.
ಕ್ಷಿಪ್ರಗತಿಯಲ್ಲಿ ಸಾಲ ಪಡೆದವರ ಮಾಹಿತಿಗಳು ಅಪ್‌ಡೇಟ್ ಆಗಬೇಕು. ಇದರಿಂದ ಯಾವುದೇ ಬ್ಯಾಂಕ್‌ಗಳಿಗೆ ಸಾಲಕ್ಕೆ ಅರ್ಜಿ ಬಂದಾಗ ಸಂಪೂರ್ಣ ಮಾಹಿತಿ ಸಿಗಲಿದೆ. ಇದರಿಂದ ಸಾಲ ನೀಡಬೇಕೋ ಬೇಡವೋ ಎನ್ನುವ ನಿರ್ಧಾರ ಕೈಗೊಳ್ಳುವುದು ಸುಲಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಹೀಗಾಗಿ, ಇನ್ಮುಂದೆ ಪರ್ಸನಲ್ ಲೋನ್ ಬೇಕಾ ಎಂದು ಪದೇ ಪದೇ ಫೋನ್ ಕಾಲ್ ಬರುವುದು ತಪ್ಪಲಿದೆ. ಲೋನ್ ಆ್ಯಪ್‌ಗಳ ಅವ್ಯವಹಾರಗಳಿಗೂ ತಡೆಬೀಳುವ ಸಾಧ್ಯತೆಯಿದೆ.
ಬೆಂಗಳೂರಿಗರಿಗೆ ಡಬ್ಬಲ್ ಶಾಕ್: ಶೀಘ್ರವೇ ಮೆಟ್ರೋ ಟಿಕೆಟ್, ನೀರಿನ ದರ ಏರಿಕೆ ಸಾಧ್ಯತೆ